ಶಾಂತಿನಗರ-ನೆಕ್ಕಿಲಾಡಿ ರಸ್ತೆ ಹೊಂಡ ವಾರದೊಳಗೆ ಮುಚ್ಚುವಂತೆ ಶಾಸಕ ಅಶೋಕ್ ರೈ ಖಡಕ್ ಸೂಚನೆ
ಪುತ್ತೂರು: ನೆಕ್ಕಿಲಾಡಿಯಿಂದ ಶಾಂತಿನಗರ ತನಕ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರಗೆ ಶಾಸಕರಾದ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಈ ರಸ್ತೆಯುದ್ದಕ್ಕೂ ಹೊಂಡಗುಂಡಿಗಳು ತುಂಬಿದ್ದು ಮಳೆ ಬಂದಾಗ ರಸ್ತೆ ಮಧ್ಯೆ ಹೊಂಡದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದೇ ರಸ್ತೆಯನ್ನು ಡಾಮರೀಕರಣ ಮತ್ತು ಅಗಲೀಕರಣ ಮಾಡಲು ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭವಾಗದೇ ಇರುವ ಕಾರಣ ಮಳೆಗೆ ಮುಂಚಿತವಾಗಿ ಹೊಂಡಗಳನ್ನು ಮುಚ್ಚುವಂತೆ ಶಾಸಕರು ಆದೇಶ ಮಾಡಿದ್ದಾರೆ.