ಪಕ್ಷ ಬಿಟ್ಟು ಹೋದವರು ನನ್ನ ಮಿತ್ರನಲ್ಲ, ಶತ್ರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಿರುದ್ಧ ಡಿ. ವಿ ಸದಾನಂದ ಗೌಡ ವಾಗ್ದಾಳಿ
ಪುತ್ತೂರು: ನಾನು ಈಗ್ಲೂ ಹೇಳ್ತೇನೆ, ಬಿಜೆಪಿಯಲ್ಲಿ ಇರುವವರಿಗೆ ನಾನು ಆಪ್ತ ಮಿತ್ರ, ಪಕ್ಷದವರಿಗೆ ನಾನು ಪಾಲುದಾರ. ಪಕ್ಷ ಬಿಟ್ಟು ಹೋದವರಿಗೆ ನಾನು ಆಪ್ತ ಮಿತ್ರನೂ ಅಲ್ಲ, ಪಾಲುದಾರನೂ ಅಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಿರುದ್ಧ ಚಾಟಿ ಬೀಸಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪಕ್ಷದಲ್ಲಿದ್ದಾಗ ಮಿತ್ರ, ಕಾಂಗ್ರೆಸ್ಸಿಗೆ ಹೋದ ಮೇಲೆ ಶತ್ರು. ನನ್ನ ಮಿತ್ರ ಅಲ್ಲ. ಅಶೋಕ್ ರೈಗೆ ಸಹಕಾರ ಮಾಡಿದ್ದು ನೀವು ಹೇಳಿದ್ರೆ ನೀವು ಹೇಳಿದ್ದನ್ನು ನಾನು ಮಾಡ್ತೇನೆ ಎಂದು ಡಿ.ವಿ ಸದಾನಂದ ಗೌಡ ಸವಾಲು ಹಾಕಿದರು.

ಪುತ್ತೂರಿನ ಜನತೆ ಪ್ರಜ್ಞಾವಂತರು ಬಿಜೆಪಿಯನ್ನು ಯಾರಿಗೂ ಏನೂ ಮಾಡಲು ಆಗುವುದಿಲ್ಲ, ಬಿಜೆಪಿ ಭ್ರದಕೋಟೆಯಲ್ಲಿ ಬಿರುಕನ್ನುಂಟು ಮಾಡುವವರೇ ಅದಕ್ಕೆ ಬಲಿಯಾಗುತ್ತಾರೆ ಎಂದು ಡಿ.ವಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು