ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೊಲೀಸರಿಗೂ ಭರ್ಜರಿ ಕೊಡುಗೆಗಳ ಘೋಷಣೆ
ಪುತ್ತೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೊಲೀಸ್ ಇಲಾಖೆಗೆ ಭರ್ಜರಿ ಆದ್ಯತೆ ನೀಡಿದೆ.

ಒಟ್ಟು ಪೊಲೀಸ್ ಬಲದಲ್ಲಿ ಶೇ 33ರಷ್ಟು ಮಹಿಳಾ ಪೊಲೀಸ್ ಬಲ ಇರುವಂತೆ ನೇಮಕಾತಿ. ಇಲ್ಲ ಕನಿಷ್ಠ ಶೇ 1ರಷ್ಟು ತೃತೀಯ ಲಿಂಗಿಗಳಗೆ ಅವಕಾಶ.
ರಾತ್ರಿ ಪಾಳೆಯ ಸಿಬ್ಬಂದಿಗೆ ರೂ 5 ಸಾವಿರ ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ.
ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ ನಾಲ್ಕು ವರ್ಷದೊಳಗೆ ಎಲ್ಲ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ ಹೊಸದಾಗಿ ಪೊಲೀಸ್ ಠಾಣೆಗಳ ನಿರ್ಮಾಣ, ಠಾಣಿಗಳ ನವೀಕರಣ, ಉತ್ತಮ ಸೌಲಭ್ಯ. ಇತ್ಯಾದಿ ಘೋಷಣೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ.