ಕಡಬ: ಟ್ಯೂಷನ್’ಗೆ ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಕುಮಾರಧಾರ ನದಿಯಲ್ಲಿ ಪತ್ತೆ..!
ಕಡಬ: ಟ್ಯೂಷನ್ ಗೆಂದು, ಮನೆಯಿಂದ ತೆರಳಿದ್ದ ಹತ್ತನೇ ತರಗತಿಯ ಬಾಲಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಕುಮಾರಧಾರ ನದಿಯ ನಾಕೂರು ಗಯದಲ್ಲಿ ಪತ್ತೆಯಾಗಿದ್ದು ಅಗ್ನಿ ಶಾಮಕ ದಳದವರು ಶವ ಮೇಲಕ್ಕೆತ್ತಿದ್ದಾರೆ.

ಕಡಬದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಅದ್ವೈತ್ ಎಂಬಾತ ಮಾ.29ರಂದು ಟ್ಯೂಷನ್ ಗೆಂದು ತೆರಳಿದ್ದು ಬಳಿಕ ಮನೆಗೆಬಾರದೆ ನಾಪತ್ತೆಯಾಗಿದ್ದ.
ಮನೆಯವರು ಹಾಗೂ ಊರವರು ಸೇರಿಕೊಂಡು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಮಾ.31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನದಿಗೆ ಹಾರಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.