ಸುಳ್ಯ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಮಾರಾಟ ವ್ಯಕ್ತಿಯ ಬಂಧನ
ಸುಳ್ಯ ಪೊಲೀಸರು ಇಂದು ಬೆಳಿಗ್ಗೆ ಧಿಡೀರ್ ಕಾರ್ಯಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.

ಸುಳ್ಯದ ಕುರುಂಜಿಗುಡ್ಡೆ ಪರಿಸರದಲ್ಲಿ ಮಾದಕ ವಸ್ತು ಮಾರಾಟ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ವಸ್ತುಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸುಳ್ಯ ಠಾಣೆಯಲ್ಲಿ ಆತನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.