ಪಿಂಚಣಿಗಾಗಿ ಹೋರಾಟ ನಡೆಸುತ್ತಿರುವ ನೌಕರರ ಬಗ್ಗೆ ಸರಕಾರಕ್ಕೆ ಇಷ್ಟೊಂದು ತಾತ್ಸಾರವೇಕೆ?- ದಿವ್ಯಾಪ್ರಭಾ ಗೌಡ ಆಕ್ರೋಶ
ಪುತ್ತೂರು: ಪಿಂಚಣಿಗಾಗಿ ಹೋರಾಟ ನಡೆಸುತ್ತಿರುವ ನೌಕರರ ಬಗ್ಗೆ ಸರಕಾರಕ್ಕೆ ಇಷ್ಟೊಂದು ತಾತ್ಸಾರವೇಕೆ? ಎಂದು ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಗೌಡ ಪ್ರಶ್ನಿಸಿದ್ದಾರೆ.

ಹೋರಾಟ ಮಾಡುತ್ತಿರುವ ನೌಕರರ ಸಮಸ್ಯೆ ಆಳಿಸಿ ಪರಿಹಾರ ಒದಗಿಸುವ ಕೆಲಸ ಈ ಸರಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ?
ಸರ್ಕಾರ ಇನ್ನಾದರೂ ತಕ್ಷಣ ಮಾತುಕತೆ ನಡೆಸಿ ಸೂಕ್ತ ರೀತಿಯಲ್ಲಿ ಸ್ಪಂದಿಸಲಿ ಎಂದು ಅವರು ಆಗ್ರಹಿಸಿದ್ದಾರೆ.