ಕರಾವಳಿ

ಪುತ್ತೂರು ಕಂಬಳದ ಬಗ್ಗೆ ಅಪಪ್ರಚಾರ ಮಾಡುವವರನ್ನು ಹತ್ತೂರಿನ ಒಡೆಯ ಮಹಾಲಿಂಗೇಶ್ವರನೇ ನೋಡಿಕೊಳ್ಳಲಿ- ಶಕುಂತಳಾ ಶೆಟ್ಟಿ



ಪುತ್ತೂರು: ಪುತ್ತೂರು ಕಂಬಳದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದ್ದು ಇಲ್ಲ ಸಲ್ಲದ ಆರೋಪಗಳನ್ನು ಯಾರೋ ಮಾಡುತ್ತಿದ್ದಾರೆ. ಅಂತವರನ್ನು ಹತ್ತೂರಿನ ಒಡೆಯ ಶ್ರೀ ಮಹಾಲಿಂಗಶ್ವರನೇ ನೋಡಿಕೊಳ್ಳುತ್ತಾನೆ ಎಂದು ಮಾಜಿ ಶಾಸಕಿ, ಕಂಬಳ ಆಯೋಜನೆಯ ರೂವಾರಿಯು ಆಗಿರುವ ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ.


‘ಅಪಪ್ರಚಾರ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ’ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.


ಕಂಬಳದ ಯಶಸ್ಸು ಸಹಿಸದವರಿಂದ ಅಪಪ್ರಚಾರ ನಡೆದಿದ್ದು ಇದು ಕಂಬಳಕ್ಕೆ ಮಾಡುವ ಅವಮಾನ. ಕಂಬಳಕ್ಕೆ ಆಗಮಿಸಿದ್ದ ಅತಿಥಿಗಳನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಪಪ್ರಚಾರ ಮಾಡುವುದರ ಹಿಂದೆ ಚಂದ್ರಹಾಸ ಶೆಟ್ಟಿ ಅವರನ್ನು ಡೌನ್ ಮಾಡುವ ಉದ್ದೇಶವೂ ಇದೆ. ಯಾರೇ ಆಗಲಿ ಕೆಟ್ಟ ಉದ್ದೇಶದಿಂದ ಅಪಪ್ರಚಾರ ಮಾಡುವುದಾದರೆ ದೇವರೇ ಅದನ್ನು ನೋಡಿಕೊಳ್ಳುತ್ತಾನೆ ಎಂದು ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ



ಕಂಬಳ ಸಮಿತಿಯವರು ಅತ್ಯುತ್ತಮವಾಗಿ ನೋಡಿಕೊಂಡಿದ್ದಾರೆ: ಸಾನ್ಯಾ ಅಯ್ಯರ್
ಕಂಬಳಕ್ಕೆ ಆಗಮಿಸಿದ್ದ ನನ್ನನ್ನು ಮನೆಮಗಳು ಎನ್ನುವ ರೀತಿಯಲ್ಲಿ ಆಯೋಜಕರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. ಕಂಬಳ ನೋಡಿಕೊಂಡು ವಾಪಾಸ್ ಹೋಗುವ ವೇಳೆ ನಶೆಯಲ್ಲಿದ್ದ ಯುವಕನೋರ್ವ ಕಿರುಕುಳ ನೀಡಲು ಯತ್ನಿಸಿದ್ದು ನಿಜ.
ಘಟನೆ ಗೊತ್ತಾದ ಕೂಡಲೇ ಆಯೋಜಕರು ನನ್ನನ್ನು ವೇದಿಕೆಗೆ ಕರೆದುಕೊಂಡು ಹೋಗಿದ್ದಾರೆ. ಇದರಲ್ಲಿ ಆಯೋಜಕ ತಪ್ಪೇನು ಇಲ್ಲ ಎಂದವರು ತಿಳಿಸಿದ್ದಾರೆ.
ನಾನು ಕಪಾಳಕ್ಕೆ ಹೊಡೆದೆ, ನನಗೆ ವಾಪಾಸ್ ಹೊಡೆದರು ಎಂದೆಲ್ಲಾ ಪ್ರಚಾರ ಆಗಿದ್ದು ಇದು ಶುದ್ಧ ಸುಳ್ಳು ಎಂದ ಸಾನ್ಯಾ, ಪುತ್ತೂರು ಕಂಬಳದ ಗೌರವ ಸ್ವಲ್ಪವೂ ಕಮ್ಮಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!