ಮಾಣಿ ದಾರುಲ್ ಇರ್ಶಾದ್ 33ನೇ ವಾರ್ಷಿಕ ಅಜ್ಮೀರ್ ಮೌಲಿದ್; ಸುಳ್ಯದಲ್ಲಿ ಪ್ರಚಾರ ಸಮಾವೇಶ
ದಾರುಲ್ ಇರ್ಶಾದ್ ಮಾಣಿ ಇದರ ಆಶ್ರಯದಲ್ಲಿ ಜನವರಿ 29 ರಂದು ನಡೆಯಲಿರುವ 33ನೇ ವಾರ್ಷಿಕ ಅಜ್ಮಿರ್ ಮೌಲೀದ್ ಹಾಗೂ 4ನೇ ಸನದು ದಾನ ಕಾರ್ಯಕ್ರಮ ಮಿತ್ತೂರು ಕೆ ಜಿ ಎನ್ ಕ್ಯಾಪಸ್ ನಲ್ಲಿ ನಡೆಯಲಿದ್ದು ಇದರ ಪ್ರಚಾರ ಸಮಾವೇಶ ಜನವರಿ 23 ರಂದು ಸುಳ್ಯ ಅನ್ಸಾರಿಯಾ ಕ್ಯಾಂಪಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ, ಚಿಕ್ಕಮಂಗಳೂರು ಜಿಲ್ಲೆಯ ಸಂಯುಕ್ತ ಖಾಝಿ ದಾರುಲ್ ಇರ್ಷಾದ್ ಮಾಣಿ ಸಂಸ್ಥೆಯ ಸಂಸ್ಥಾಪಕ ಝೈನುಲ್ ಉಲಾಮಾ ಮಾಣಿ ಉಸ್ತಾದ್ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಕೇಳಿಕೊಂಡರು. ಈ ವೇಳೆ ಮಾತನಾಡಿದ ಅವರು ಕಳೆದ 33 ವರ್ಷಗಳ ಹಿಂದೆ ಈ ಸಂಸ್ಥೆ ವಿದ್ಯಾರ್ಥಿಗಳ ಸಹಕಾರದಿಂದ ಆರಂಭಗೊಂಡು ಇಂದು ಸಾವಿರಾರು ವಿದ್ಯಾರ್ಥಿಗಳು ನಮ್ಮ ಈ ಸಂಸ್ಥೆಯಲ್ಲಿ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ನಾಡಿನ ಮತ್ತು ವಿದೇಶಗಳಲ್ಲಿ ದುಡಿಯುವ ನೂರಾರು ಮಂದಿ ದಾನಿಗಳು, ಸಾಮಾಜಿಕ ಧಾರ್ಮಿಕ ನೇತಾರರ ಸಹಕಾರದಿಂದ ಸಾಧ್ಯವಾಗಿದೆ. ಅವರೆಲ್ಲರನ್ನು ಕೃತಜ್ಞತಾಪೂರ್ವಕವಾಗಿ ನಾವು ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ವತಿಯಿಂದ ಉಸ್ತಾದ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಇದರ ಖತೀಬರಾದ ಅಲ್ಹಾಜ್ ಅಶ್ರಫ್ ಕಾಮಿಲ್ ಸಖಾಫಿ, ಮೊಗರ್ಪಣೆ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ, ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಕಮಿಟಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ, ಕಾರ್ಯದರ್ಶಿ ಕೆ ಬಿ ಮಜೀದ್, ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಅರ್ಲಡ್ಕ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್, ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್, ಹಿರಿಯರಾದ ಹಾಜಿ ಐ ಇಸ್ಮಾಯಿಲ್, ಹಸ್ಸನ್ ಹಾಜಿ ಬಾಳೆಮಕ್ಕಿ, ಎಸ್ ಎಂ ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುಲ್ ರಜಾಕ್ ರಾಜಧಾನಿ, ನಗರ ಪಂಚಾಯತ್ ಸದಸ್ಯರುಗಳಾದ, ಕೆ.ಎಸ್ ಉಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್ ಸೇರಿದಂತೆ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಳ್ಯ ನಗರ ಪರಿಸರದ ವಿವಿಧ ಮಸೀದಿಗಳ ಆಡಳಿತ ಸಮಿತಿ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಾರುಲ್ ಇರ್ಷಾದ್ ಮಾಣಿಯಲ್ಲಿ ನಡೆಯಲಿರುವ 33ನೇ ವರ್ಷದ ವಾರ್ಷಿಕ ಅಜ್ಮೀರ್ ಮೌಲೀದ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ನಡೆಯಿತು.
ಸಂಸ್ಥೆಯ ಮುಖ್ಯಸ್ಥರಾದ ಬದ್ರುದ್ದೀನ್ ಅಹ್ಸನಿ ಅಲ್ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಸ್ಥೆ ನಡೆದು ಬಂದ ಹಾದಿಯ ಕುರಿತು ವಿವರಗಳನ್ನು ನೀಡಿದರು.
ಹಾಜಿ ಮುಸ್ತಫ ಜನತಾ ಸ್ವಾಗತಿಸಿ ಅನ್ಸಾರಿಯ ಎಜುಕೇಶನಲ್ ಸೆಂಟರ್ ಇದರ ಮುಅಲ್ಲಿಮ್ ಅಂಝತುಲ್ ಖರ್ರಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.