ಜ.21: ಕೋಲ್ಪೆಯಲ್ಲಿ 9ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್- ಇಶಲ್ ನೈಟ್-2023
ಪುತ್ತೂರು: ಇಡ್ಕಿದು ಗ್ರಾಮದ ಬದ್ರಿಯಾ ಜುಮಾ ಮಸೀದಿ ಹಾಗೂ ಜಮಾಅತ್ ಕಮಿಟಿ ಕೋಲ್ಪೆ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್‌ಮೆನ್ಸ್ ಅಸೋಸಿಯೇಷನ್ ಕೋಲ್ಪೆ ಇದರ 20ನೇ ವಾರ್ಷಿಕ ಮಹಾಸಂಗಮ ಹಾಗೂ 9ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್ ‘ಇಶಲ್ ನೈಟ್-2023’ ಕಾರ್ಯಕ್ರಮ ಜ.21ರಂದು ರಾತ್ರಿ ಗಂಟೆ 7-00ರಿಂದ ಕೋಲ್ಪೆ ಬದ್ರಿಯಾ ಮದ್ರಸದ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಗಾಯಕರಾದ ಕೇರಳ ಫೋಕ್ ಲೋರ್ ಅಕಾಡಮಿ ಇದರ ವೈಸ್ ಚೇರ್‌ಮೆನ್ ಡಾ.ಉಸ್ತಾದ್ ಕೋಯ ಕಾಪಾಡ್ ಹಾಗೂ ಸಂಗಡಿಗರಿಂದ ಬುರ್ದಾ ಮಜ್ಲಿಸ್ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.





