ಕರಾವಳಿ

ನ.29: ಅರಿಯಡ್ಕ ಉತ್ಸವ-ಶಾಸಕರ ಅಭಿವೃದ್ಧಿ ಕಾರ್ಯಗಳ ಸಂಭ್ರಮ

ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಅರಿಯಡ್ಕ ಉತ್ಸವ-2026 ವಿನೂತನ ಕಾರ್ಯಕ್ರಮ, ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಸಂಭ್ರಮ, ಸಾಧಕರಿಗೆ ಸನ್ಮಾನ ಹಾಗೂ ಅರಿಯಡ್ಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನ.29ರಂದು ಕೌಡಿಚ್ಚಾರ್ ಜಂಕ್ಷನ್ ನಲ್ಲಿ ನಡೆಯಲಿದೆ.

ಮುಖ್ಯವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2800ಕ್ಕೂ ಅಧಿಕ ಅನುದಾನ ಹಾಗೂ ಅರಿಯಡ್ಕ ಗ್ರಾಮಕ್ಕೆ ಕೋಟ್ಯಂತರ ಅನುದಾನ ನೀಡಿರುವ ಶಾಸಕ ಅಶೋಕ್ ರೈ ಅವರ ಅಭಿವೃದ್ಧಿ ಕಾರ್ಯಗಳ ಸಂಭ್ರಮಾಚರಣೆ ನಡೆಯಲಿದ್ದು  ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸುಡುಮದ್ದು ಪ್ರದರ್ಶನ ಕೂಡಾ ನಡೆಯಲಿದ್ದು ಭಾಗವಹಿಸುವ ಎಲ್ಲರಿಗೂ ಜ್ಯೂಸ್, ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!