ಪುತ್ತೂರಿನ ಸುಲ್ತಾನ್ ಡೈಮಂಡ್ಸ್ ಗೋಲ್ಡ್‌ನಲ್ಲಿ ವಿಶ್ವವಜ್ರ ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ.25ರಿಂದ ಅ.10ರ ವರೆಗೆ ನಡೆಯಲಿರುವ ‘ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್’ ವಜ್ರಾಭರಣಗಳ ಪ್ರದರ್ಶನಕ್ಕೆ ಸೆ.25ರಂದು ಸಂಜೆ ಚಾಲನೆ ನೀಡಲಾಯಿತು.

ವಜ್ರಾಭರಣಗಳ ಪ್ರದರ್ಶನವನ್ನು ಉದ್ಘಾಟಿಸಿದ ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನ ವೈದ್ಯೆ ಡಾ.ಹಬೀನಾ ಮಾತನಾಡಿ ಡೈಮಂಡ್ ಅಥವಾ ಚಿನ್ನ ಅದೊಂದು ಆಕರ್ಷಣೀಯ ಆಭರಣ ಮಾತ್ರವಲ್ಲ, ಬದಲಾಗಿ ಮಹಿಳೆಯ ಗೌರವವೂ ಆಗಿದ್ದು ಆಭರಗಳಲ್ಲಿ ಭಾವನಾತ್ಮಕ ವಿಚಾರಗಳೂ ಅಡಗಿದೆ ಎಂದು ಹೇಳಿದರು. ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯಲ್ಲಿ ಅಭರಣಗಳ ಸಂಗ್ರಹವು ಬಹಳ ಚೆನ್ನಾಗಿದ್ದು ಅದ್ಭುತವಾಗಿದೆ, ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮವಾಗಿದ್ದು ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ, ಇದು ಭವಿಷ್ಯದಲ್ಲಿ ಇನ್ನಷ್ಟು ಹೆಸರು ಪಡೆಯಲಿ ಎಂದು ಹಾರೈಸಿದರು.
ವಜ್ರಾಭರಣಗಳ ಅನಾವರಣ:
ಅತಿಥಿಗಳು ಇಟಲಿ, ಯು.ಎಸ್, ಟರ್ಕಿಷ್, ಬೆಲ್ಜಿಯಂ, ಫ್ರೆಂಚ್ ಹಾಗೂ ಟ್ರೆಡೀಷನಲ್ ಡೈಮಂಡ್ ಆಭರಣಗಳನ್ನು ಅನಾವರಣಗೊಳಿಸಿದರು.
ಡ್ಯಾಶ್ ಮಾರ್ಕೆಟಿಂಗ್ ಕಂಪೆನಿಯ ಎಂ.ಡಿ ನಳಿನಿ ಪಿ ಶೆಟ್ಟಿ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಸಂಸ್ಥೆಯು ಗ್ರಾಹಕರ ವಿಶ್ವಾಸಾರ್ಹ ಮಳಿಗೆಯಾಗಿದ್ದು ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಹಾರೈಸಿದರು.
ಫ್ಯಾಶನ್ ಡಿಸೈನರ್ ಶ್ರಾವ್ಯ ಜಗದೀಶ್ ಶೆಟ್ಟಿ ಮಾತನಾಡಿ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯಲ್ಲಿ ಉತ್ತಮ ವಜ್ರಾಭರಣಗಳ ಸಂಗ್ರಹವಿದ್ದು ಈ ವಿಚಾರ ಹೆಚ್ಚಿನ ಗ್ರಾಹಕರಿಗೆ ತಲುಪಬೇಕು, ಇಲ್ಲಿಗೆ ಭೇಟಿ ನೀಡಿರುವುದು ನನಗೆ ಅತೀವ ಖುಷಿ ನೀಡಿದೆ ಎಂದು ಹೇಳಿದರು.
ಲಿಲ್ಲಿ ಎವಲಿನ್ ಡಿಸೋಜಾ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆ ನನಗಂತೂ ತುಂಬಾ ಇಷ್ಟವಾಗಿದೆ, ಇಲ್ಲಿನ ಕಲೆಕ್ಷನ್, ಸಿಬ್ಬಂದಿಗಳ ಸೇವೆ ಎಲ್ಲವೂ ಉತ್ತಮವಾಗಿದೆ, ಈ ಮಳಿಗೆಯ ಬಗ್ಗೆ ಬೇರೆಯವರಲ್ಲೂ ಹೇಳಿಕೊಳ್ಳುವ ಮೂಲಕ ನಾವು ಹೆಚ್ಚಿನ ಪ್ರಚಾರ ಮತ್ತು ಬೆಂಬಲ ನೀಡಬೇಕು ಎಂದು ಹೇಳಿದರು.
ವಿಲ್ಮಾ ಪ್ರಿಯಾಂಕ ಡಿಸೋಜಾ ಮಾತನಾಡಿ ಆಭರಣ ಎಂದರೆ ಅದೊಂದು ಖುಷಿ, ಸಂತೋಷ. ನಮ್ಮ ಮನಸ್ಸಿಗೊಪ್ಪುವ ಆಭರಣಗಳ ಕಲೆಕ್ಷನ್ ಇಲ್ಲಿದ್ದು ಈ ಮಳಿಗೆ ಗ್ರಾಹಕರ ನೆಚ್ಚಿನ ಮಳಿಗೆಯಾಗಿದೆ ಎಂದು ಹೇಳಿದರು.

ಆರ್ಲಪದವು ಸೌಂದರ್ಯ ಹರ್ಬಲ್ ಬ್ಯೂಟಿ ಪಾರ್ಲರ್‌ನ ದೀಕ್ಷಾ ರೈ ಮಾತನಾಡಿ ನಾನು ಸುಲ್ತಾನ್ ಮಳಿಗೆಗೆ ಫ್ಯಾಮಿಲಿ ಸಮೇತ ಬಂದಿದ್ದು ಇಲ್ಲಿ ಅತ್ಯುತ್ತಮ ಕಲೆಕ್ಷನ್ ಇದೆ, ಈ ಮಳಿಗೆಗೆ ಎಲ್ಲರೂ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಭರ್ಜರಿ ಡಿಸ್ಕೌಂಟ್:
ಅತ್ಯಾಧುನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ ಇಟಲಿ, ಫ್ರಾನ್ಸ್, ಅಮೇರಿಕಾ, ಬೆಲ್ಜಿಯಂ, ಸಿಂಗಾಪುರ, ಟರ್ಕಿ ಹಾಗೂ ಮಧ್ಯಪ್ರಾಚ್ಯ ಶೈಲಿಯ ಪರಿಪೂರ್ಣವಾದ ನೈಸರ್ಗಿಕ ವಜ್ರಾಭರಣಗಳ ಬೃಹತ್ ಸಂಗ್ರಹ ಇಲ್ಲಿದೆ. ಸೆ.25ರಿಂದ ಅ.10ರ ವರೆಗೆ ನಡೆಯುವ ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್ಸಿಬಿಷನ್‌ನಲ್ಲಿ ರಿಯಾಯಿತಿ ದರದಲ್ಲಿ ವಜ್ರಾಭರಣ ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಸಂಸ್ಥೆಯ ಮ್ಯಾನೇಜರ್ ರವಾಹತ್ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ನವ್ಯ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು.



