ವಿಟ್ಲದ ಭಾರತ್ ಡಿಜಿಟಲ್ ಸೇವಾ ಕೇಂದ್ರದಲ್ಲಿ ವಾಹನಗಳ ಇನ್ಸೂರೆನ್ಸ್, ವಾಯುಮಾಲಿನ್ಯ ತಪಾಸಣೆ ಮಾಡಿಸುವವರಿಗೆ ಉಚಿತವಾಗಿ ಸಿಗಲಿದೆ ಟಿ ಶರ್ಟ್
ಪುತ್ತೂರು:ಬೆಂಗಳೂರು, ನೇರಳಕಟ್ಟೆ, ಹಾಗೂ ಕೊಡಾಜೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವಹಿಕಲ್ ಬಜಾರ್ ಇದರ ಸಹಸಂಸ್ಥೆ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸೆ.3ರಂದು ವಿಟ್ಲ ಮೇಗಿನಪೇಟೆಯಲ್ಲಿ ಶುಭಾರಂಭಗೊಳ್ಳಲಿದೆ.

ಶುಭಾರಂಭ ಪ್ರಯುಕ್ತ ಸೆ.3ರಿಂದ ಸೆ.5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಸೂರೆನ್ಸ್ ಹಾಗೂ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸುವವರಿಗೆ ಉಚಿತವಾಗಿ ಟಿ ಶರ್ಟ್ ಸಿಗಲಿದೆ.
ನೂತನ ಸಂಸ್ಥೆಯನ್ನು ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಭಾರತ್ ಗ್ರೂಪ್‌ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು, ಸದಸ್ಯ ವಿ.ಕೆ.ಎಂ ಅಶ್ರಫ್, ಪತ್ರಕರ್ತ ಲತೀಫ್ ನೇರಳಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತ್ ಡಿಜಿಟಲ್ ಸೇವಾ ಕೇಂದ್ರದ ಮಾಲಕ ಅಶ್ರಫ್ ಪುತ್ತೂರು ತಿಳಿಸಿದ್ದಾರೆ.



