ಕರಾವಳಿ

ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಸಾಧಕರಿಗೆ ಅಭಿನಂದನೆ, ಸನ್ಮಾನ ಸಮಾರಂಭ




ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದಂದು ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ವಸಂತ ಮೂಲ್ಯ ಪಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿಪರ ಕೃಷಿಕ, ದಾನಿ ವಾಸು ಪೂಜಾರಿ ಗುಂಡ್ಯಡ್ಕ ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ, ನಿವೃತ್ತಿಯಾದ ವಸಂತ ಮೂಲ್ಯ ಪಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಮಹಮ್ಮದ್ ಅಲ್ತಾಫ್ ಹಾಗೂ ಅರುಣ್ ಕುಮಾರ್ ಸನ್ಮಾನಿಸಿದರು.



ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಚರಿಷ್ಮಾ ಕೆ, ಶ್ರವಣ್ ಕುಮಾರ್, ಚಿರಾಗ್, ಪಂಚಮಿ, ಲಾವಣ್ಯ, ರಂಜಿತ್ ಅವರನ್ನು ಅರಿಯಡ್ಕ ವಲಯ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ರೈ ಕುತ್ಯಾಡಿ ಅಭಿನಂದಿಸಿ ಶುಭ ಹಾರೈಸಿದರು. ಉಳಿದ 43 ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು. ಅತಿಥಿಗಳಾಗಿ ನಿಶು ಸ್ಟುಡಿಯೋದ ಮಾಲಕ ನವೀನ್ ಪಕ್ಕಳ, ಕುಂಬ್ರದ ವರ್ತಕರ ಸಂಘದ  ಉಪಾಧ್ಯಕ್ಷ ಸದಾಶಿವ, ನಿವೃತ್ತ ವಿಜ್ಞಾನ ಶಿಕ್ಷಕಿ ಇಂದಿರಾ ಪಿ, ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ  ಥೆರೆಸ ಎಂ ಸಿಕ್ವೇರ, ಹಿರಿಯ ವಿದ್ಯಾರ್ಥಿ ಆಕಾಶ್ ಪಿ ಜೆ  ಶುಭ ಹಾರೈಸಿದರು.ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ರಮೇಶ್ ಪರ್ಪುಂಜ ಉಪಸ್ಥಿತರಿದ್ದರು.



ಎಸ್‌ಎಸ್‌ಎಲ್‌ಸಿ ಯಲ್ಲಿ ನೂರು ಶೇ. ಫಲಿತಾಂಶ ಸಾಧಿಸುವಲ್ಲಿ ಪ್ರಯತ್ನಿಸಿದ ಸಂಸ್ಥೆಯ ಮುಖ್ಯ ಗುರುಗಳು ಹಾಗೂ ಎಲ್ಲಾ ಶಿಕ್ಷಕರನ್ನು ಎಸ್‌ಡಿಎಂಸಿ ವತಿಯಿಂದ ಗೌರವಿಸಲಾಯಿತು. ಎಸ್‌ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ, ದೇವಪ್ಪ ನಾಯ್ಕ, ಚಂದ್ರ, ರೇವತಿ, ಲಲಿತ, ಗೀತಾ, ನಿವೃತ್ತ ಹವಾಲ್ದಾರ ವಿಶ್ವನಾಥ ಗೌಡ, ಎಸ್‌ಡಿಎಂಸಿಯ ಮಾಜಿ ಸದಸ್ಯರಾದ ಜಯಲಕ್ಷ್ಮಿ, ಲೀಲಾವತಿ, ಭಾಗಿರಥಿ ಉಪಸ್ಥಿತರಿದ್ದರು. ಪಾಪೆಮಜಲು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು, ಸ್ಥಳೀಯ ದಾನಿಗಳಾದ ವೆಂಕಪ್ಪ ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಮೋನಪ್ಪ ಬಿ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಪ್ರೀತ ಟಿ ಎಂ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕಿ ಪ್ರವೀಣಾ ರೈ ಬಿ ವಂದಿಸಿದರು. ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರಘು ಬಿ ಆರ್, ಸ್ಮಿತಾ ಕೆ ಎನ್, ಶಾಲೆಟ್ ಜೇನ್ ರೆಬೆಲ್ಲೊ, ಹರಿಣಾಕ್ಷಿ ಕೆ ಸಹಕರಿಸಿದರು. ಸವಣೂರು ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ಪವಿತ್ರ ಉಡುಪ ಅವರ ದೇಶಭಕ್ತಿ ಗೀತೆ ಹಾಡಿದರು.

Leave a Reply

Your email address will not be published. Required fields are marked *

error: Content is protected !!