ಲಾವಣ್ಯ ಕೊಲೆ ಪ್ರಕರಣ: ಆರೋಪಿ ಕತ್ತಿ ಖರೀದಿಸಿದ್ದ ಉಪ್ಪಿನಂಗಡಿಯ ಅಂಗಡಿಯಲ್ಲಿ ಮಹಜರು
ಉಪ್ಪಿನಂಗಡಿ: ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಲಾವಣ್ಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯು ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ ಎಂಬ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಬುಧವಾರ ಮಹಜರು ಪ್ರಕ್ರಿಯೆ ನಡೆಸಲಾಯಿತು.

ಲಭ್ಯ ಮಾಹಿತಿಯ ಪ್ರಕಾರ ಆರೋಪಿಯು ತನ್ನ ಏಕಮುಖ ಪ್ರೀತಿಯನ್ನು ಮಾನ್ಯ ಮಾಡದ ಲಾವಣ್ಯಾರನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ತನಿಖಾಧಿಕಾರಿಗಳು ಆರೋಪಿ ಚೇತನ್ ನ ಮುಖವನ್ನು ಕಪ್ಪು ಬಟ್ಟೆಯಿಂದ ಮರೆಮಾಚಿ ಸ್ಥಳಕ್ಕೆ ಕರೆ ತಂದಿದ್ದು ಮಹಜರು ಪ್ರಕ್ರಿಯೆಯನ್ನು ನಡೆಸಿದರು. ತನಿಖಾ ಹಾಗೂ ಮಹಜರು ಪ್ರಕ್ರಿಯೆಗೆ ಮಾರಾಟ ಮಳಿಗೆಯ ಸಿಬ್ಬಂದಿ ಸಹಕರಿಸಿದರು.





