ಬಿಸಿ ರೋಡು: ಯುವತಿಯ ಬರ್ಬರ ಹತ್ಯೆ, ಎಂ.ಎಸ್ ಮಹಮ್ಮದ್ ಖಂಡನೆ
ಬಂಟ್ವಾಳ: ಬಿಸಿ ರೋಡು ಬಸ್ ನಿಲ್ದಾಣದಲ್ಲಿ ಯುವತಿಯನ್ನು ಯುವಕನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬಹಳ ಆತಂಕಕಾರಿ ಬೆಳವಣಿಗೆಯಾಗಿದ್ದು ಆರೋಪಿ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಆಗ್ರಹಿಸಿದ್ದಾರೆ.

ಯುವತಿಯನ್ನು ಹತ್ಯೆ ಮಾಡಿರುವ ಘಟನೆ ತೀವ್ರ ಖಂಡನೀಯವಾಗಿದ್ದು ಹಾಡಹಗಲೇ ಈ ರೀತಿಯ ಪೈಶಾಚಿಕ ಕೃತ್ಯವೆಸಗಿದ್ದನ್ನು ನೋಡುವಾಗ ದಿಗ್ಭ್ರಮೆ ಮೂಡುತ್ತದೆ. ಶಾಂತಿಯುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಘಟನೆಗಳು ಯಾವತ್ತೂ ಮರುಕಳಿಸಬಾರದು, ಹಾಗಾಗಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.




