ನನ್ನ ಮಗನನ್ನು ಕೊಲೆ ಮಾಡಲಾಗಿದೆ-ಮೃತ ಮುಸ್ತಾಕ್ ತಂದೆ ಶರೀಫ್ ಆರೋಪ
ಉಪ್ಪಿನಂಗಡಿ: ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಜಾಗದಲ್ಲಿ ಅವಿವಾಹಿತ ಯುವಕ ಕಲ್ಲೇರಿಯ ಮುಸ್ತಾಕ್ ಅವರ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದ್ದು ನನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತ ಮುಸ್ತಾಕ್ಅವರ ತಂದೆ ಆರೋಪಿಸಿದ್ದಾರೆ.

ಮನೆಯಿಂದ ಕೆಲಸಕ್ಕೆಂದು ತೆರಳಿದ್ದ ಮಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿರುವ ತಂದೆ ಶರೀಫ್, ನನ್ನ ಮಗನನ್ನು ಯಾರೋ ಕೊಲೆ ಮಾಡಿ ಇಲ್ಲಿ ಎಸೆದಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚಾಲಕ ವೃತ್ತಿಯಲ್ಲಿರುವ ಮಗನನ್ನು ರಾತ್ರಿ ಲಾರಿ ಲೋಡ್ ಆಗಿದೆ ಎಂದು ಕರೆದಿದ್ದರು. ಅದರಂತೆ ಅವನನ್ನು ಸಣ್ಣ ಮಗ ಮನೆಯಿಂದ ಬೈಕ್ನಲ್ಲಿ ಬಿಟ್ಟು ಬಂದಿದ್ದರು. ಜು.1ರಂದು ಬೆಳಗ್ಗೆ ವಿಚಾರ ತಿಳಿಯಿತು. ಮಗನನ್ನು ಬೇರೆ ಎಲ್ಲಿಯೋ ಕೊಲೆ ಮಾಡಿ ಇಲ್ಲಿ ತಂದು ಎಸೆದು ಹೋಗಿದ್ದಾರೆ. ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ಆರೋಪಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಮುಸ್ತಾಕ್ರ ತಂದೆ ಶರೀಫ್ ಕೆ. ಒತ್ತಾಯಿಸಿದ್ದಾರೆ





