ಕರಾವಳಿ

ಸುಲ್ತಾನ್ ಡೈಮಂಡ್ & ಗೋಲ್ಡ್ ಮಳಿಗೆಯಲ್ಲಿ ‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ

ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿಯಲ್ಲಿರುವ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆಯಲ್ಲಿ ವಿಶ್ವ ವಜ್ರ ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ ಮೇ.15ರಂದು ನಡೆಯಿತು.

ಡೈಮಂಡ್ ಎಕ್ಸಿಬಿಷನ್ ಉದ್ಘಾಟಿಸಿದ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಝುಲೈಖಾಬಿ ವೈ ಮಾತನಾಡಿ, ಆಭರಣಗಳು ಕೇವಲ ಆಕರ್ಷಣೆ ಮಾತ್ರವಲ್ಲ, ಸೌಂದರ್ಯ, ಸಂಸ್ಕೃತಿ, ಸಂಪ್ರದಾಯವೂ ಆಗಿದ್ದು ಸುಲ್ತಾನ್ ಗೋಲ್ಡ್ ತನ್ನ ಅತ್ಯುತ್ತಮ ಕಲೆಕ್ಷನ್ ಮತ್ತು ಸೇವೆಯ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು  ಹೇಳಿದರು. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿರುವ ಸುಲ್ತಾನ್ ಮಳಿಗೆ ಮುಂದೆಯೂ ಜನರ ಮನಸ್ಸು ಗೆಲ್ಲುವ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಅವರು ಶುಭ ಹಾರೈಸಿದರು.

 




ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ.ಹಬೀನಾ ಮಾತನಾಡಿ ಸುಲ್ತಾನ್ ಗೋಲ್ಡ್ ಚಿನ್ನ, ವಜ್ರಗಳ ಮಾರಾಟದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದ ಮಳಿಗೆಯಾಗಿದ್ದು ಇದೀಗ ವಿಶ್ವ ವಜ್ರ ಪ್ರದರ್ಶನ, ಮಾರಾಟದ ಮೂಲಕ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ, ನಾನು ಈ ಮಳಿಗೆಯ ಗ್ರಾಹಕಿಯಾಗಿದ್ದು ಇಲ್ಲಿನ ಕಲೆಕ್ಷನ್ಸ್ ಮತ್ತು ಸೇವೆ ಅತ್ಯುತ್ತಮವಾಗಿದೆ ಎಂದು ಹೇಳಿದರು.



ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ ಮಾತನಾಡಿ ಸುಲ್ತಾನ್ ಗೋಲ್ಡ್ ಶುದ್ದತೆ ಮತ್ತು ಪಾರದರ್ಶಕತೆಯಲ್ಲಿ ಹೆಸರು ಪಡೆದಿದ್ದು ಇಂತಹ ಹೆಸರಾಂತ ಮಳಿಗೆ ನಮ್ಮೂರಲ್ಲಿ ಇರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಎಂದು ಹೇಳಿದರು. ವಿಶ್ವ ವಜ್ರ ಪ್ರದರ್ಶನ, ಮಾರಾಟ ನಮ್ಮೂರಲ್ಲಿ ನಡೆಯುತ್ತಿರುವುದು ನಮ್ಮ ಪಾಲಿಗೆ ಒದಗಿ ಬಂದ ಸುವರ್ಣಾವಕಾಶವಾಗಿದ್ದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ಹೇಳಿದರು.



ಅಡ್ವೊಕೇಟ್ ಸುನಿತಾ ಎಂ ಡಿಸೋಜಾ ಮಾತನಾಡಿ, ಸುಲ್ತಾನ್ ಗೋಲ್ಡ್ ಮಳಿಗೆ ಗ್ರಾಹಕರ ನೆಚ್ಚಿನ ಹೆಸರಾಂತ ಮಳಿಗೆಯಾಗಿದ್ದು ವಿಶ್ವ ವಜ್ರ ಪ್ರದರ್ಶನದ ಮೂಲಕ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ, ಇದರ ಸದುಪಯೋಗವನ್ನು ಗ್ರಾಹಕರು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.



ಬೆಳ್ಳಾರೆ ಗುರು ಆರ್ಟ್ಸ್‌ನ ಬ್ಯುಟಿಶಿಯನ್ ಶರ್ಮಿಳಾ, ಸುರಯ್ಯ ಡ್ರೆಸ್ಸಸ್‌ನ ಸುಮಯ್ಯ ನವಾಝ್ ಬೊಳ್ವಾರ್, ಝಿವಾಸ್ ಹೆನ್ನಾ ಆರ್ಟಿಸ್ಟ್ ಶಬ್ನಮ್ ಶುಭ ಹಾರೈಸಿದರು.
ಕಾರ್ಯಕ್ರಮದ ಬಳಿಕ ನಿಶಾಝ್ ಮೇಕ್‌ಓವರ್ ಇದರ ನಿಶ್ಮಾ, ಶಹನಾಸ್ ಮೇಕ್‌ಓವರ್ ಇದರ ಶಹನಾಸ್ ಆಗಮಿಸಿ ಶುಭ ಹಾರೈಸಿದರು.



ವಜ್ರಾಭರಣಗಳ ಬೃಹತ್ ಪ್ರದರ್ಶನ:
ಮೇ.15ರಿಂದ ಮೇ.31ರ ವರೆಗೆ ವಿಶ್ವ ವಜ್ರ ಡೈಮಂಡ್ ಎಕ್ಸಿಬಿಷನ್ ನಡೆಯಲಿದ್ದು ಡೈಮಂಡ್ ಮೌಲ್ಯದ ಮೇಲೆ 20% ಕಡಿತ ಹಾಗೂ ಚಿನ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ 50% ವರೆಗೆ ಕಡಿತ ಘೋಷಿಸಲಾಗಿದೆ. ಅತಿಥಿಗಳು ಡೈಮಂಡ್ ಆಭರಣಗಳಾದ ಬೆಲ್ಜಿಯಂ, ತುರ್ಕಿಷ್, ಟ್ರೆಡೀಷನಲ್, ಮಿಡಲ್ ಈಸ್ಟ್, ಯು.ಎಸ್, ಫ್ರೆಂಚ್ ಆಭರಣಗಳನ್ನು ಬಿಡುಗಡೆಗೊಳಿಸಿ ಪ್ರದರ್ಶಿಸಿದರು. ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕುದಾದ ವಜ್ರಾಭರಗಳು ಲಭ್ಯವಿದ್ದು ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ಪುತ್ತೂರು ಬ್ರಾಂಚ್ ಮ್ಯಾನೇಜರ್ ರವಾಹತ್ ಹಾಗೂ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯ ಸಿಬ್ಬಂದಿ ಮೇಘನಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!