6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಮಂಗಳೂರು: 2018ರಲ್ಲಿ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿರುವ ಪೂಜಾ ಮೊಬೈಲ್ಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಸುಮಾರು 2,17,740/- ಮೌಲ್ಯದ ಮೊಬೈಲ್ ಫೋನ್, ಅದರ ಬಿಡಿಭಾಗ, ಸಿಸಿಟಿವಿ ಡಿವಿಆರ್ ಹಾಗೂ 2,100 ನಗದು ಹಣವನ್ನು ಕಳವು ಮಾಡಿ, ರೂ. 10,000 ಮೌಲ್ಯದ 02 ಕಂಪ್ಯೂಟರ್ ಮೊನಿಟರನ್ನು ಒಡೆದು ನಷ್ಟವುಂಟು ಮಾಡಿರುವ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ 2018 ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ. 152/2018 ಕಲಂ. 427, 457, 380 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ , 34 ವರ್ಷ, ತಂದೆ: ರಿಯಾಜ್ ಉದ್ದೀನ್ ಲಸ್ಕರ್, ವಾಸ- ಲಕ್ಕಿಪುರ್ ಥಾನಾ, ಸಿಲ್ಚಾರ್, ಕಾಚಾರ್ ಜಿಲ್ಲೆ, ಅಸ್ಸಾಂ ರಾಜ್ಯ ಎಂಬಾತ ಕಳೆದ 6 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್ ನ್ನು ಹೊರಡಿಸಿರುತ್ತದೆ.
ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರದ ಬಳಿ ಮೇಲಾಧಿಕಾರಿಗಳ ನಿರ್ದೇಶನದಂತೆ, ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ಮಾರ್ಗದರ್ಶನದಲ್ಲಿ, ಠಾಣಾ ಸಿ ಹೆಚ್ ಸಿ ಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್, ಸಿಪಿಸಿಗಳಾದ ರಾಕೇಶ್ ಮತ್ತು ವಿನಯ್ ರವರುಗಳು ಮೇ.11ರಂದು ದಸ್ತಗಿರಿ ಮಾಡಿದ್ದು,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




