ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ: ಪುತ್ತೂರು ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಪೀದ 595 ಅಂಕದ ಸಾಧನೆ


ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಪೀದ ಅವರು 600ರಲ್ಲಿ 595(ಶೇ.99.10) ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಪರೀಕ್ಷೆ ಬರೆದ 6 ಸಬ್ಜೆಕ್ಟ್ ಗಳ ಪೈಕಿ 4ರಲ್ಲಿ
100ಕ್ಕೆ 100 ಅಂಕ ಪಡೆದಿರುವ ಇವರು ಇನ್ನುಳಿದ 2 ಸಬ್ಜೆಕ್ಟ್ ನಲ್ಲಿ 99 ಹಾಗೂ 96 ಅಂಕ ಪಡೆದಿದ್ದಾರೆ.
ಇವರು ನರಿಮೊಗರು ಗ್ರಾಮದ ಮುಕ್ವೆ ನಿವಾಸಿ, ಮುಕ್ವೆ ಸ.ಹಿ.ಉ.ಹಿ.ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಕುಂಞಿ ಹಾಗೂ ಜಮೀಳಾ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!