ಕರಾವಳಿ

ಕಡಬ: ತಲೆನೋವಿಗೆಂದು ಔಷಧ ಸೇವಿಸಿದ 10 ವರ್ಷದ ಬಾಲಕ ಮೃತ್ಯು


ಕಡಬ: ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ ಹತ್ತು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ


ರಾಮಕುಂಜ ನಿವಾಸಿ ಸಂಜೀವ ಪೂಜಾರಿ (50) ಎಂಬವರ 10 ವರ್ಷದ ಪುತ್ರನಿಗೆ ಪದೇಪದೇ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಅದರಂತೆ ಮಾ.18ರಂದು ಸಂಜೆ ಬಾಲಕನಿಗೆ ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ್ದಾನೆ. ಆ ಬಳಿಕ ಬಾಲಕನು ನೋವಿನಿಂದ ಮನೆಯಲ್ಲಿ ಹೊರಳಾಡುತ್ತಿರುವುದನ್ನು ಗಮನಿಸಿದ ತಾಯಿ, ಕೂಡಲೇ ಪತಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೃತನ ತಂದೆ ಸಂಜೀವ ಪೂಜಾರಿ ನೀಡಿದ ದೂರಿನಂತೆ, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!