ಎರಡು ಮಸೀದಿಗೆ 55 ಲಕ್ಷ ರೂ. ಅನುದಾನ ಮಂಜೂರು: ಶಾಸಕ ಅಶೋಕ್ ರೈ
ಪುತ್ತೂರು: ಕರ್ನಾಟಕ ರಾಜ್ಯ ವಕಫ್ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಮಸೀದಿಗೆ ಒಟ್ಟು 55 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಸತಿ,ವಕಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಝಮೀರ್ ಅಹ್ಮದ್‌ರವರನ್ನು ಭೇಟಿಯಾದ ಶಾಸಕರು ಎರಡು ಮಸೀದಿಗೆ ಸಂಬಂದಪಟ್ಟಂತೆ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ವೆಲು ಬದ್ರಿಯಾ ಜುಮಾ ಮಸೀದಿಯಲ್ಲಿ ನೂತನ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ 35 ಲಕ್ಷ ಹಾಗೂ ಇಡ್ಕಿದು ಬದ್ರಿಯಾ ಜುಮಾ ಮಸೀದಿಯಲ್ಲಿ ಶೌಚಾಲಯ ಮತ್ತು ಶುದ್ದಕುಡಿಯುವ ನೀರಿನ ವ್ಯವಸ್ಥೆಗೆ 20 ಲಕ್ಷ ಅನುದಾನ ಮಂಜೂರುಗೊಂಡಿದೆ ಎಂದು ತಿಳಿಸಿದ್ದಾರೆ. ಕಳೆದ ಕೆಲದಿನಗಳ ಹಿಂದೆ ಕರ್ವೆಲು ಮಸೀದಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದ ಶಾಶಕರು ಮಸೀದಿಗೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದರು.




