ಕರಾವಳಿರಾಜಕೀಯ

ಕಾಂಗ್ರೆಸ್ ಮನರೇಗಾ ಬಚಾವ್ ಪಾದಯಾತ್ರೆ: ಕಾರ್ಯಕರ್ತರ ಬಾಯಾರಿಕೆ ನೀಗಿಸಿದ ಇಕ್ಬಾಲ್ ಹುಸೇನ್

ಪುತ್ತೂರು: ಕಾಂಗ್ರೆಸ್‌ನಿಂದ ಸುಳ್ಯದಿಂದ ಮೂಲ್ಕಿ ತನಕ ನಡೆಯುವ ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಜಂಕ್ಷನ್‌ನಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಕಲ್ಲಂಗಡಿ ಹಣ್ಣು ಮತ್ತು ಮಜ್ಜಿಗೆ ವಿತರಿಸಿದರು.

ಸಾಂದರ್ಭಿಕ ಚಿತ್ರ



ಪಾದಯಾತ್ರೆಯಲ್ಲಿದ್ದ ಎಂಎಲ್ಸಿ ಐವನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಅಶೋಕ್ ಕುಮಾರ್ ರೈ ಸಹಿತ ಪಾದಯಾತ್ರೆಯಲ್ಲಿದ್ದ ಐನೂರಕ್ಕೂ ಮಿಕ್ಕಿದ ಕಾರ್ಯಕರ್ತರಿಗೆ ಸುಮಾರು 2 ಕ್ವಿಂಟಾಲ್ ಕಲ್ಲಂಗಡಿಯನ್ನು ವಿತರಿಸಿದರು. ಅರಿಯಡ್ಕ ವಲಯ ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಸಹಕರಿಸಿದರು. ಇಕ್ಬಾಲ್ ಹುಸೇನ್ ಅವರ ಕಾರ್ಯಕ್ಕೆ ಪಕ್ಷದ ನಾಯಕರು ಪ್ರಶಂಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!