ಬೆಳ್ತಂಗಡಿ: ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಯತ್ನ, ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಫೆ.2ರಂದು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು ಶಾಖೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ(ನಿ)ದಲ್ಲಿ ಬೆಳಿಗ್ಗೆ 2 ಗ್ರಾಹಕರು ಬಂದು ಅದರಲ್ಲಿ ಅಬ್ದುಲ್ ನಝೀರ್ ಎಂಬಾತನ ಹೆಸರಿನಲ್ಲಿ ಚಿನ್ನದ ಸರ ಅಡವಿಡಲು ಇರುವುದಾಗಿ ತಿಳಿಸಿದಂತೆ 3 ಚಿನ್ನದ ಸರಗಳನ್ನು ನೀಡಿದ್ದು, ಸದ್ರಿ ಚಿನ್ನವನ್ನು ಪರೀವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ, ಸದ್ರಿ ಮೂರು ಚಿನ್ನದ ಸರಗಳು ನಕಲಿ ಎಂದು ಸಾಬೀತಾಗಿರುತ್ತದೆ.
ಈ ಬಗ್ಗೆ ಸದರಿ ಬ್ರಾಂಚ್ ನ ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 11/2026 ಕಲಂ: 318(4) ,62 ಜೊತೆಗೆ 3(5) BNS 2023ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳಾದ ಅಬ್ದುಲ್ ನಝೀರ್ (43) ಕುಳಿ ಗ್ರಾಮ ಬಂಟ್ವಾಳ ತಾಲೂಕು ಹಾಗೂ ಪ್ರಮೋದ್ ಪಿ. (50) ಬೋಳಂತೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.




