ಕ್ರೈಂರಾಜ್ಯ

ಯುವತಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ!

ಕೆಲಸ ಹುಡುಕಲು ಮನೆಯಿಂದ ಹೋಗಿದ್ದ ಯುವತಿಯೋರ್ವಳು ಶವವಾಗಿ ಪತ್ತೆಯಾಗಿದ್ದಾಳೆ. ಪ್ಯಾರಾಮೆಡಿಕಲ್ ಪೂರ್ಣಗೊಳಿಸಿದ್ದ ಧಾರವಾಡದ ಗಾಂಧಿ ಚೌಕ್ನ ನಿವಾಸಿ 21 ವರ್ಷ ಝಕಿಲಾ ಜ.20 ಮನೆಯಿಂದ ಹೋಗಿದ್ದವಳು. ಆದರೆ ಜ.21ರಂದು ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಝಕಿಲಾ ಮುಲ್ಲಾ ಮೃತದೇಹ ಪತ್ತೆಯಾಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಉಂಟಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಶವವಾಗಿ ಬಿದ್ದಿರುವ ಝಕಿಲಾ ಮುಲ್ಲಾಗೆ 21 ವರ್ಷ ವಯಸ್ಸು. ಧಾರವಾಡದ ಗಾಂಧಿ ಚೌಕ್ನ ನಿವಾಸಿ ಆಗಿದ್ದ ಯುವತಿ, ಪ್ಯಾರಾಮೆಡಿಕಲ್ ಪೂರೈಸಿದ್ಳು. ಕೆಲಸ ಹುಡುಕಲೆಂದು ಮನೆಯಿಂದ ಹೊರಟಿದ್ದಳು ಎನ್ನಲಾಗುತ್ತಿದೆ. ರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ. ಮನೆಯವರು ಧಾರವಾಡ ಟೌನ್ ಪೊಲೀಸರಿಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!