ಕರಾವಳಿ

ಮಾದಕ ವಸ್ತು ಮಾರಾಟ: ಆರೋಪಿ ಬಂಧನ



ಮಂಗಳೂರು: ಉಳ್ಳಾಲ ಮುನ್ನೂರು ಗ್ರಾಮದ ರಾಣಿಪುರ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.



ನಂದಾವರ ಸಜಿಪ ಮುನ್ನೂರು ನಿವಾಸಿ ಇಮ್ಮಿಯಾಝ್ ಯಾನೆ ಮುಹಮ್ಮದ್ ಇಮ್ಮಿಯಾಝ್ ಬಂಧಿತ ಆರೋಪಿ. ಈತನಿಂದ 65,000 ರೂ. ಮೌಲ್ಯದ 13 ಗ್ರಾಂ ಎಂಡಿಎಂಎ ಮತ್ತು ಎರಡು ಸಾವಿರ ರೂ. ನಗದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಈತ ಮಾದಕ ವಸ್ತುವನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!