ಇಂದು(ಜ.11) ಮೂಡಡ್ಕ ಮಖಾಂ ಉರೂಸ್ ಸಮಾರೋಪ
ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ತೆಕ್ಕಾರು ಮೂಡಡ್ಕ ಮಖಾಮ್ ಉರೂಸ್ ಗೆ ಜ.11ರಂದು ನಡೆಯಲಿದ್ದು
ಕಳೆದ ಐದು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಇಂದು ರಾತ್ರಿ ಸಮಾಪ್ತಿಗೊಳ್ಳಲಿದೆ.

ಬೆಳಿಗ್ಗೆ ಹತ್ತು ಗಂಟೆಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಖತಮುಲ್ ಕುರ್-ಆನ್, ಸಂಜೆ ವೇಳೆ ಬೃಹತ್ ಸಂದಲ್ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು ಮಗ್ರಿಬ್ ನಂತರ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯದ್ ಮಶ್ಹೂದ್ ತಂಙಳ್ ದುಆಶೀರ್ವಚನ ನೀಡಲಿದ್ದಾರೆ. ಖ್ಯಾತ ಪ್ರಭಾಷಣಗಾರ ಯಾಸಿನ್ ಜೌಹರಿ ಕೊಲ್ಲಮ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ರಾಜಕೀಯ, ನಾಯಕರು ಉಲಮಾಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.





