ಕರಾವಳಿಕ್ರೈಂರಾಜ್ಯ

ಉಪ್ಪಿನಂಗಡಿ: ಅಂಬ್ಯುಲೈನ್ಸ್  ಕಳ್ಳತನ ಪ್ರಕರಣ: ಆರೋಪಿಯ ಬಂಧನ


ಉಪ್ಪಿನಂಗಡಿ: ಅಂಬ್ಯುಲೈನ್ಸ್  ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.

ಕಡಬ ಶಿರಾಡಿ ನಿವಾಸಿ ಸುರೇಶ್ (46) ಅಂಬ್ಯಲೆನ್ಸ್ ಚಾಲಕರಾಗಿದ್ದು, ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ ಲಾಕ್‌ ಮಾಡಿ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಅದರಂತೆ ಡಿ.19ರಂದು ರಾತ್ರಿ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ, ಅಪಘಾತದ ಬಗ್ಗೆ ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಅಂಬ್ಯಲೆನ್ಸ್ ಕೀಯನ್ನು ಅಂಬ್ಯುಲೆನ್ದ್‌ನಲ್ಲಿ ಇಟ್ಟು ಹೋಗಿದ್ದರು. ಮರುದಿನ ಬೆಳಿಗ್ಗೆ, ಮನೆಯಿಂದ ಬಂದು  ಅಂಬ್ಯುಲೆನ್ಸ್‌  ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಅಂಬ್ಯುಲೆನ್ಸ್‌ ಕಳ್ಳತನವಾಗಿತ್ತು.


ಸುರೇಶ್ ಅವರ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:  117/2025 ಕಲಂ: 303(2)  ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಡಿ.20ರಂದು ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಆರೋಪಿ ಉಡುಪಿ ಕಾರ್ಕಳ ನಿವಾಸಿ ಶೋದನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೈನ್ಸ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!