ತಾಯಿಗೆ ಮಗಳಿಂದ ಅಮಾನವೀಯ ಹಲ್ಲೆ; ವೀಡಿಯೋ ವೈರಲ್
ಮಂಗಳೂರು: ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಗರದ ಹೊರ ವಲಯದ ಮೂಡುಶೆಡ್ಡೆ ಗ್ರಾ.ಪಂ ಆವರಣದಲ್ಲಿ ನಡೆದ ಘಟನೆ ತಿಳಿದು ಬಂದಿದೆ. ತಾಯಿ ಮತ್ತು ಮಗಳ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರುತ್ತಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ತಾಯಿ ಮೂಡುಶೆಡ್ಡೆ ಗ್ರಾ.ಪಂ.ಗೆ ತೆರಳಿ ಮಗಳ ವಿರುದ್ಧ ದೂರು ನೀಡತೊಡಗಿದ್ದಾರೆ. ಮೂರು ದಿನದ ಹಿಂದೆ ತಾಯಿ ಗ್ರಾ.ಪಂ. ಕಚೇರಿಗೆ ತೆರಳಿ ದೂರು ನೀಡುತ್ತಿದ್ದಾಗ ಮಗಳು ತಾಯಿಯನ್ನು ತಳ್ಳಿದ್ದಾಳೆ. ತಾಯಿ ನೆಲಕ್ಕೆ ಬಿದ್ದಿದ್ದಾರೆ, ಆಕ್ರೋಶಗೊಂಡ ಮಗಳು ಚಪ್ಪಲಿಯಿಂದ ತಾಯಿಯ ಮುಖಕ್ಕೆ ಹೊಡೆಯುತ್ತಿರುವ ಅಮಾನವೀಯವಾಗಿ ಘಟನೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಗ್ರಾ.ಪಂ. ಕಚೇರಿಯಲ್ಲಿದ್ದವರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕವಾಗಿ ಹರಿದಾಡುತ್ತಿದೆ.
ವೀಡಿಯೋ ಮಾಡಿದವರು ಆ ತಾಯಿಗೆ ಹಲ್ಲೆ ನಡೆಸದಂತೆ ಮಗಳನ್ನು ತಡೆಯದೇ ವಿಡಿಯೋ ಮಾಡಿದ್ದೇಕೆ ಎಂದು ಜನರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ತಾಯಿಗೆ ಹಲ್ಲೆ ನಡೆಸಿದ ಮಗಳ ವಿರುದ್ಧ ಸ್ವಯಂ ಪ್ರೇರಣೆ
ದಾಖಲಿಸಬೇಕಿತ್ತು ಎಂಬ ಆಗ್ರಹ ಕೇಳಿ ಬಂದಿದೆ.
ತಾಯಿ- ಮಗಳ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿಲ್ಲ. ವೀಡಿಯೋ ಮಾಡಿ ಅದಕ್ಕೆ ಹೆಚ್ಚು ವೀಕ್ಷಣೆ ಬರುವ ಉದ್ದೇಶದಿಂದ ವೈರಲ್ ಮಾಡಿದ ವ್ಯಕ್ತಿಯ ಬಗ್ಗೆ ಯಾರದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೂಳ್ಳವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.



