ಬಡಕ್ಕೋಡಿ: ಕಾರು ಪಲ್ಟಿ-ಚಾಲಕನಿಗೆ ಗಾಯ
ಪುತ್ತೂರು: ಕಾರೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಡಕ್ಕೋಡಿ ಮಸೀದಿ ಬಳಿ ನ.26ರಂದು ನಡೆದಿದೆ.

ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಬಡಕ್ಕೋಡಿ ಮಸೀದಿ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ಕಣಿಗೆ ಉರುಳಿ ಬಿದ್ದಿದೆ.
ಘಟನೆಯಿಂದ ಕಾರು ಚಾಲಕನ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಕಾರು ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ





