ಕ್ರೈಂರಾಷ್ಟ್ರೀಯ

ಶಾಲೆಗೆ ತಡವಾಗಿ ಬಂದದ್ದಕ್ಕೆ 100 ಬಸ್ಕಿ ಶಿಕ್ಷೆ: ವಿದ್ಯಾರ್ಥಿನಿ ಸಾವು



ಶಾಲೆಗೆ ತಡವಾಗಿ ಬಂದದ್ದಕ್ಕೆ ಬಾಲಕಿಗೆ 100 ಬಸ್ಕಿ ತೆಗೆಯುವ ಶಿಕ್ಷೆ ನೀಡಲಾಗಿದ್ದು, ಆನಂತರ ಅಸ್ವಸ್ಥಗೊಂಡ ಬಾಲಕಿ ವಾರದ ಬಳಿಕ ಮೃತಪಟ್ಟ ಘಟನೆ ಮಹಾರಾಷ್ಟ್ರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.


ವಸಾಯಿ ಪ್ರದೇಶದ ಸತಿವಲಿಯಲ್ಲಿರುವ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮುಂಬೈಯ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ. ನ.8ರಂದು ಶಾಲೆಗೆ ತಡವಾಗಿ ಬಂದಿರುವುದಕ್ಕೆ ಅಂಶಿಕಾ ಹಾಗೂ ಇತರ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 100 ಬಸ್ಕಿ ತೆಗೆಯುವ ಶಿಕ್ಷೆ ನೀಡಲಾಗಿತ್ತು ಎನ್ನಲಾಗಿದೆ.


ಅಮಾನವೀಯ ಶಿಕ್ಷೆಯಿಂದ ತನ್ನ ಪುತ್ರಿ ಮೃತಪಟ್ಟಿದ್ದಾಳೆ. ಶಿಕ್ಷಕರು ಶಾಲಾ ಬ್ಯಾಗ್ ಅನ್ನು ಕುತ್ತಿಗೆಗೆ ನೇತು ಹಾಕಿಸಿ ಆಕೆಯಿಂದ ಬಸ್ಕಿ ತೆಗೆಸಿದ್ದಾರೆ. ಆನಂತರ ‘ನನ್ನ ಪುತ್ರಿ ಕುತ್ತಿಗೆ ಹಾಗೂ ಬೆನ್ನಿನಲ್ಲಿ ತೀವ್ರ ನೋವಾಗುತ್ತಿದೆ. ಎದ್ದೇಳಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಳು” ಎಂದು ಅಂಶಿಕಾಳ ತಾಯಿ ಹೇಳಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!