ಜಿಲ್ಲೆ

ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಸ್ಕೂಟರ್- ವಿದ್ಯಾರ್ಥಿನಿ ಮೃತ್ಯು

ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಬಡಿದು ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಪೂಕಟ್ಟೆ ಎಂಬಲ್ಲಿ ಗುರುವಾರ ನಡೆದಿದೆ.

ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಝಾಕ್ -ರಂಶೀನಾ ದಂಪತಿಯ ಪುತ್ರಿ ರಿಸ್ವಾನ (15)ಮೃತ ಪಟ್ಟವಳು .
ರಿಸ್ವಾನಾ ಮತ್ತು ಗೆಳತಿ ಸ್ಕೂಟರಿನಲ್ಲಿ ಟ್ಯೂಷನ್ ಗೆ ಹೋಗುವಾಗ ದುರಂತ ಉಂಟಾಯಿತು. ಅಪಘಾತದ ಬೆನ್ನಲ್ಲೇ ಇಬ್ಬರನ್ನೂ ಕುಂಬಳೆ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಗಾಯಗೊಂಡ ರಿಸ್ವಾನಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!