ಕರಾವಳಿ

ವಿಟ್ಲ: ಹದಗೆಟ್ಟ ಬೈರಿಕಟ್ಟೆ-ಕನ್ಯಾನ ರಸ್ತೆ, ಹೊಂಡದಲ್ಲಿ ಶವದ ಅಣಕು ಪ್ರದರ್ಶನ

ವಿಟ್ಲ: ವಿಟ್ಲ-ಕನ್ಯಾನ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಅಣಕು ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿಗೆ ಇಂಟರ್‌ಲಾಕ್ ಅಳವಡಿಸಿದ್ದು, ಅದೀಗ ಕಿತ್ತು ಹೋಗಿದೆ. ಈ ರಸ್ತೆ ವಿಟ್ಲದಿಂದ ಕನ್ಯಾನ, ಬಾಯಾರು, ಉಪ್ಪಳ, ಆನೆಕಲ್ಲು, ಮಂಜೇಶ್ವರ ಕಡೆಗೆ ಸಂಪರ್ಕಕಲ್ಪಿಸುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರ ಭಾರೀ ಕಷ್ಟಕರವಾಗಿದೆ.

ಇದೀಗ ಸ್ಥಳದಲ್ಲಿ ‘ಅಧಿಕಾರಿಗಳು, ಇಂಜಿನಿಯರ್‌ಗಳು, ಗುತ್ತಿಗೆದಾರರು ಮಲಗಿರುತ್ತಾರೆ. ಯಾರೂ ತೊಂದರೆ ಕೊಡಬಾರದು ಎಂದು ಬರೆದು ಬೋರ್ಡ್’ ಅಳವಡಿಸಲಾಗಿದೆ. ಈ ರಸ್ತೆಯ ಬಗ್ಗೆ ಹಲವು ವರ್ಷಗಳಿಂದ ಇಲಾಖೆಗೆ ದುರಸ್ತಿ ಮಾಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ರೀತಿಯಾಗಿ ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!