ಟೆಸ್ಟ್ ಕ್ರಿಕೆಟ್: ಧೋನಿ ದಾಖಲೆ ಮುರಿದ ರವೀಂದ್ರ ಜಡೇಜ
ಅಹ್ಮದಾಬಾದ್: ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಗರಿಷ್ಠ ಸಿಕ್ಸರ್ ಹಿಟ್ಟರ್ ಎನಿಸಿಕೊಂಡು ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆಯನ್ನು ಮುರಿದಿದ್ದಾರೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಜಡೇಜ ಈ ಸಾಧನೆ ಮಾಡಿದ್ದಾರೆ. ಜಡೇಜ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ಗಳ ಸಹಿತ ಔಟಾಗದೆ 104 ರನ್ ಗಳಿಸಿದರು. ಜಡೇಜ 86 ಟೆಸ್ಟ್ ಪಂದ್ಯಗಳಲ್ಲಿ 79ನೇ ಸಿಕ್ಸರ್ ಸಿಡಿಸಿದ್ದು, ಧೋನಿ(90 ಪಂದ್ಯಗಳಲ್ಲಿ 78 ಸಿಕ್ಸರ್) ದಾಖಲೆಯನ್ನು ಹಿಂದಿಕ್ಕಿದರು.