ಐಸಿಸಿ ರ‍್ಯಾಂಕಿಂಗ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
ಏಷ್ಯಾ ಕಪ್‌ನಲ್ಲಿ ರನ್ ಮಳೆ ಹರಿಸಿದ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಭಿಷೇಕ್ ಶರ್ಮಾ ಮೊದಲ ಸ್ಥಾನ ಗಳಿಸಿದ್ದು ಅಲ್ಲದೇ 926 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ. ಈ ಮೂಲಕ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದಾರೆ.

2020 ರಲ್ಲಿ ಇಂಗ್ಲೆಂಡಿನ ಡೇವಿಡ್ ಮಲಾನ್ 919 ರೇಟಿಂಗ್ ಪಾಯಿಂಟ್ ಪಡೆದಿದ್ದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಇದೀಗ ಅಭಿಷೇಕ್ ಶರ್ಮಾ 2025ರ ಏಷ್ಯಾ ಕಪ್‌ನ 7 ಪಂದ್ಯಗಳಿ 314 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಹಿಂದೆ 909 ರೇಟಿಂಗ್ ಪಾಯಿಂಟ್ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್ ಪಾಯಿಂಟ್ ಆಗಿತ್ತು. ಆದರೆ ಇದೀಗ ಅಭಿಷೇಕ್ ಶರ್ಮಾ ಅವರು ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್ (8 ಬೌಂಡರಿ, 2 ಸಿಕ್ಸ್) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್ ಶರ್ಮಾ ಅವರ ರೇಟಿಂಗ್ ಪಾಯಿಂಟ್ ಮೇಲಕ್ಕೆ ಹೋಗಿದ್ದು, ಮೊದಲ ಸ್ಥಾನ ಗಳಿಸಿದ್ದಾರೆ. ಅಂಕಪಟ್ಟಿಯಲ್ಲಿ ಫಿಲ್ ಸಾಲ್ಟ್ 2ನೇ ರ‍್ಯಾಂಕ್ ಪಡೆದರೆ ತಿಲಕ್ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು 8ನೇ ಸ್ಥಾನಕ್ಕೆ ಇಳಿದಿದ್ದಾರೆ.