ಇಂದು(ಅ.2) ಅಲ್ ಇಹ್ಸಾನ್ ಟ್ರಾವೆಲ್ಸ್ ನ ಅಕ್ಟೋಬರ್ ತಿಂಗಳ ಉಮ್ರಾ ಯಾತ್ರೆ
ಪುತ್ತೂರು: ದರ್ಬೆ ಅಲ್ ಇಹ್ಸಾನ್ ಟ್ರಾವೆಲ್ಸ್ ಆಶ್ರಯದಲ್ಲಿ ಖ್ಯಾತ ಹಜ್ ಉಮ್ರಾ ಅಮೀರರಾದ ಸಿರಾಜುದ್ದೀನ್ ಫೈಝಿ ಯವರ ನೇತೃತ್ವದ ಅಕ್ಟೋಬರ್ ತಿಂಗಳ ಉಮ್ರಾ ಯಾತ್ರಾ ತಂಡಗಳು ಇಂದು(ಅ.2) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ.

ಮಂಗಳೂನಿಂದ ಜೆದ್ದಾಗೆ ನೇರ ವಿಮಾನ ಆರಂಭಗೊಂಡ ಬಳಿಕ ಒಂದೇ ಟ್ರಾವೆಲ್ಸ್ ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ 120 ಮಂದಿ ಯಾತ್ರಿಕರು ಒಂದೇ ವಿಮಾನದಲ್ಲಿ ಏಕ ಕಾಲದಲ್ಲಿ ಉಮ್ರಾ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಯಾತ್ರಾರ್ಥಿಗಳು ಏರ್ಪೋರ್ಟ್ ಸಮೀಪವಿರುವ ಮರವೂರು ಮಸೀದಿಗೆ ಬರಲಿದ್ದು, ಅಲ್ಲಿ ನಮಾಝ್ ಹಾಗೂ ಇಹ್ರಾಮಿನ ಪ್ರಕ್ರಿಯೆಗಳನ್ನು ಮುಗಿಸಿ, ಟ್ರಾವೆಲ್ಸ್ ನವರಿಂದ ಯಾತ್ರಾ ದಾಖಲೆಗಳನ್ನು ಪಡೆದು ಏರ್ಪೋರ್ಟ್ ಪ್ರವೇಶಿಸಲಿದ್ದಾರೆ.
ಇದೀಗ ಮಕ್ಕಾದಲ್ಲಿರುವ ಚೀಫ್ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ಜಿದ್ದಾ ತಲುಪುವ ಯಾತ್ರಿಕರನ್ನು ಸ್ವೀಕರಿಸಿ ನೇತೃತ್ವ ನೀಡಲಿದ್ದಾರೆ. ಮಹಿಳಾ ಯಾತ್ರಿಕರಿಗೆ ಸಿರಾಜುದ್ದೀನ್ ಫೈಝಿ ಉಸ್ತಾದರ ಪತ್ನಿ ಮಾರ್ಗದರ್ಶನ ನೀಡಲಿದ್ದು,ಯಾತ್ರೆಯಲ್ಲಿ ಸಹಾಯಕರನ್ನು ನೇಮಿಸಿದ್ದು ಯಾತ್ರಾರ್ಥಿಗಳಿಗೆ ನೆರವಾಗಲಿದ್ದಾರೆ.
ಸೆಪ್ಟೆಂಬರ್ 18ಕ್ಕೆ ತೆರಳಿದ ತಂಡ ನಾಳೆ (ಅ.3) ಮಂಗಳೂರಿಗೆ ನೂರು ಮಂದಿಯನ್ನೊಳಗೊಂಡ ಎರಡು ತಂಡಗಳು ಅದೇ ವಿಮಾನದಲ್ಲಿ ಜೆದ್ದಾದಿಂದ ಮರಳಲಿದ್ದು ಮುಂಜಾನೆ ಮಂಗಳೂರು ತಲುಪಲಿದ್ದಾರೆ ಎಂದು ಸಂಸ್ಥೆ ಯ ಮುಖ್ಯಸ್ಥ ಮಸೂದ್ ದರ್ಬೆ ತಿಳಿಸಿದ್ದಾರೆ.