ಅಂತಾರಾಷ್ಟ್ರೀಯಕ್ರೀಡೆ

ಏಷ್ಯಾ ಕಪ್: ರನ್ ಮೆಷಿನ್ ಎಂದು ವಾಸಿಂ ಅಕ್ರಮ್ ಹೇಳಿದ್ದು ಯಾರನ್ನು ಗೊತ್ತೇ..?

ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ತಂಡ ಪಾಕಿಸ್ತಾನವನ್ನು ಬಗ್ಗು ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅತ್ತಪಾಕ ತಂಡ ಸೋಲುತ್ತಿದ್ದಂತೆ ಪಾಕ್ ನ ಮಾಜಿ ವೇಗಿ, ಹಾಲಿ ವೀಕ್ಷಕ ವಿವರಣೆಗಾರ ವಾಸಿಂ ಅಕ್ರಮ್ ತಮ್ಮದೇ ತಂಡದ ಆಟಗಾರನೊಬ್ಬನ ವಿರುದ್ಧ ಕಿಡಿ ಕಾರಿದ್ದಾರೆ.

ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಾಕ್ ತಂಡ ಸೋಲುತ್ತಿದ್ದಂತೆ ಆಕ್ರೋಶ ಹೊರಹಾಕಿರುವ ವಾಸಿಂ ಅಕ್ರಮ್, ಈ ಪರಾಜಯಕ್ಕೆ ಹಾರಿಸ್ ರೌಫ್ ಪ್ರಮುಖ ಕಾರಣ ಎಂದಿದ್ದಾರೆ. ಚಾನೆಲ್ ಚರ್ಚೆಯಲ್ಲಿ ಕಾಣಿಸಿಕೊಂಡ ವಾಸಿಂ ಅಕ್ರಮ್ ಪಾಕಿಸ್ತಾನ್ ತಂಡದ ಪ್ರದರ್ಶನವನ್ನು ವಿಶ್ಲೇಷಿಸಿದ್ದರು. ಅದರಲ್ಲೂ ಒಂದು ಹಂತದಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯವು ಪಾಕ್ ತಂಡದ ಕೈ ತಪ್ಪಿ ಹೋಗಲು ಮುಖ್ಯ ಕಾರಣ ಹಾರಿಸ್ ರೌಫ್ ಎಂದು ನೇರ ಮಾತುಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನನ್ನ ಪ್ರಕಾರ, ಹಾರಿಸ್ ರೌಫ್ ಭಾರತದ ವಿರುದ್ಧದ ರನ್ ಮಷಿನ್. ಈ ಹಿಂದೆ ಕೂಡ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡದ ಸೋಲಿಗೆ ಕಾರಣರಾಗಿದ್ದರು. ಇದೀಗ ಮತ್ತೊಮ್ಮೆ ಪಾಕಿಸ್ತಾನ್ ಪಾಲಿಗೆ ದುಬಾರಿಯಾಗಿದ್ದಾರೆ. ಈ ಮೂಲಕ ಹಾರಿಸ್ ರೌಫ್ ಟೀಮ್ ಇಂಡಿಯಾ ಪಾಲಿನ ರನ್ ಮೆಷಿನ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ವಾಸಿಂ ಅಕ್ರಮ್ ಪಾಕ್ ತಂಡದ ಪ್ರಮುಖ ವೇಗಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಪಂದ್ಯದ 15ನೇ ಓವರ್ನಲ್ಲಿ ರೌಫ್ 17 ರನ್ ನೀಡಿದ್ದರು. ಇನ್ನು 18ನೇ ಓವರ್ನಲ್ಲಿ 13 ರನ್ ಬಿಟ್ಟು ಕೊಟ್ಟರು. ಅಲ್ಲದೆ ಅಂತಿಮವಾಗಿ ಓವರ್ನ 4 ಎಸೆತಗಳಲ್ಲೇ 10 ರನ್ ಚಚ್ಚಿಸಿಕೊಳ್ಳುವ ಮೂಲಕ ಪಂದ್ಯವನ್ನು ಬೇಗನೆ ಮುಗಿಸಿದರು. ಈ ಕಳಪೆ ಪ್ರದರ್ಶನದಿಂದಾಗಿ ಪಾಕ್ ತಂಡ ಸೋಲನುಭವಿಸಿದೆ ಎಂದು ವಾಸಿಂ ಅಕ್ರಮ್ ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!