ಪುತ್ತೂರು: ತನ್ನ ಕೈಯನ್ನು ಗೀರಿದ ವ್ಯಕ್ತಿಗೆ ಗಂಭೀರ ಗಾಯ
ಪುತ್ತೂರು: ತನ್ನ ಕೈಯನ್ನು ಬ್ಲೇಡ್ ನಿಂದ ತಾನೇ ಗೀರಿ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸೆ.28ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ

ಕೈಯನ್ನು ಗೀರಿಕೊಂಡ ವ್ಯಕ್ತಿ ಕೇರಳ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾಕಾಗಿ ಈ ರೀತಿ ಮಾಡಿದ್ದಾನೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.