ಕಬಕ: ಕಲ್ಲಂದಡ್ಕ ಕೋರೆಯ ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು
ವಿಟ್ಲ: ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಸೆ.21ರಂದು ನಡೆದಿದೆ.

ಕಬಕ ನಿವಾಸಿ ಹಸೈನ್ ಎಂಬವವರ ಪುತ್ರ ಮುಹಮ್ಮದ್ ಅಜ್ಜಾನ್ (15) ಮೃತ ಬಾಲಕ. ಈತ ಪುತ್ತೂರಿನ ಸಾಲ್ಮರ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದನು.
ಮುಹಮ್ಮದ್ ಅಜ್ಜಾನ್ ತನ್ನ ಸ್ನೇಹಿತರೊಂದಿಗೆ ಬಳಕೆಯಿಲ್ಲದ ಕೋರೆಯ ಬಳಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.