ಇಂದು ಸಂಜೆ ಸಾರೆಪುಣಿ ಮದರಸ ವಿದ್ಯಾರ್ಥಿಗಳ ಕಲಾ ಕಾರ್ಯಕ್ರಮ
ಪುತ್ತೂರು: ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿ ಇದರ ವತಿಯಿಂದ ಮದರಸ ಮಕ್ಕಳ ಕಲಾ ಕಾರ್ಯಕ್ರಮ ಸೆ.13ರಂದು ಅಸರ್ ನಮಾಝಿನ ಬಳಿಕ ಮುಹಿಯುದ್ದೀನ್ ಜುಮಾ ಮಸೀದಿ ಸಾರೆಪುಣಿ ವಠಾರದಲ್ಲಿ ನಡೆಯಲಿದೆ.

ದುವಾ ನೇತೃತ್ವವನ್ನು ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನಿರ್ವಹಿಸಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಸಾರೆಪುಣಿ ವಹಿಸಲಿದ್ದಾರೆ. ಸಾರೆಪುಣಿ ಮಸೀದಿ ಖತೀಬ್ ಮನ್ಸೂರ್ ರಯೀಸಿ ಉದ್ಘಾಟನೆ ಮಾಡಲಿದ್ದಾರೆ, ಪ್ರಾಸ್ತಾವಿಕ ಭಾಷಣ ಬಿ. ಸ್ ಅಬ್ಬಾಸ್ ಮದನಿ ಮಾಡಲಿದ್ದಾರೆ. ಸಾರೆಪುಣಿ ಮದರಸ ಮುಹಲ್ಲಿಮ್ ಹಮೀದ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಅಬ್ದುಲ್ ಶಕೂರ್ ದಾರಿಮಿ, ಶಂಸುಲ್ ಉಲಮಾ ಯಂಗ್ಮೆನ್ಸ್ ಗೌರವಾದ್ಯಕ್ಷ ಇಸ್ಮಾಯಿಲ್ ಘಟ್ಟಮನೆ, ಉದ್ಯಮಿ ಸುಲೈಮಾನ್ ಕುಣಿಯ, ಸಂಶುಲ್ ಉಲಮಾ ಯಂಗ್ಮೆನ್ಸ್ ಸಾರೆಪುಣಿ ಇದರ ಅಧ್ಯಕ್ಷ ಶರೀಫ್ ಘಟ್ಟಮನೆ ಮೊದಲಾದ ಗಣ್ಯರು ಬಾಗವಹಿಸಲಿದ್ದಾರೆ ಎಂದು ಸಾರೆಪುಣಿ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಎಚ್ ಎ ಇಕ್ಬಾಲ್ ಸಾರೆಪುಣಿ ತಿಳಿಸಿದ್ದಾರೆ