ಕರಾವಳಿಕ್ರೈಂ

ಮಹಿಳೆಯರಿಗೆ ಕಿರುಕುಳ ಆರೋಪ: ಬಾಲಕ ವಶಕ್ಕೆ

ಬಂಟ್ವಾಳ: 13 ವರ್ಷದ ಬಾಲಕನೊಬ್ಬ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಪಾಣೆಮಂಗಳೂರು ಪೇಟೆ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪರಿಚಿತ ಸ್ಕೂಟರ್ ಸವಾರನೋರ್ವ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಸಾರ್ವಜನಿಕವಾಗಿ ಗಂಭೀರ ಆರೋಪಗಳು ವ್ಯಕ್ತವಾಗಿದ್ದು, ಪೊಲೀಸರಿಗೆ ಸವಾಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ಥಳೀಯವಾಗಿ ಕೆಲವು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಆ.26ರಂದು ಆರೋಪಿ ಬಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ಬಾಲಕ ಸ್ಕೂಟರ್‌ನಲ್ಲಿ ಬಂದು ರಸ್ತೆ ಯಲ್ಲಿ ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪಾಣೆಮಂಗಳೂರು ಪೇಟೆ ಬಳಿ ತನ್ನ ಪೊಷಕರ ಜೊತೆ ವಾಸವಾಗಿರುವ ಈ ಬಾಲಕ ಈ ಕೃತ್ಯ ಎಸಗಿರುವುದು ಲಭ್ಯ ಸಾಕ್ಷಾಧಾರಗಳಿಂದ ಸಾಬೀತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕನನ್ನು ಆ.26ರಂದು ಆತನ ಮನೆಯಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಮಂಗಳೂರು ಬಾಲ ನ್ಯಾಯ ಮಂಡಳಿ ಸಮಕ್ಷಮಕ್ಕೆ ಹಾಜರುಪಡಿಸಲಾಗಿದೆ. ಬಾಲ ನ್ಯಾಯಾಲಯವು ಬಾಲಕನನ್ನು ಸೆಪ್ಟೆಂಬರ್ 2ರವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶಿಸಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!