ಕಲ್ಲುಗುಂಡಿ: ಬೈಕ್ ಢಿಕ್ಕಿ; ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು
ಸುಳ್ಯ: ಕಲ್ಲುಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದ ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಜು.27ರಂದು ವರದಿಯಾಗಿದೆ. ಕಲ್ಲುಗುಂಡಿಯ ಅಂಚೆ ಕಚೇರಿ ಬಳಿ ಬಸ್ ತಂಗುದಾಣದಿಂದ ಸಂಪಾಜೆ ಕಡೆ ಹೋಗುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ
ಸಂಪಾಜೆ ಬೈಲು ನಿವಾಸಿ ವೆಂಕಪ್ಪ ಎಂಬವರ ಪತ್ನಿ ಕಮಲಾ (67) ಎಂಬವರಿಗೆ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ಮೂಲದ ಬೈಕ್ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಅಪಘಾತದ ಪರಿಣಾಮ ಗಂಭೀರ ಗಾಯಗೊಂಡ ಕಮಲಾರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಕಲ್ಲುಗುಂಡಿ ಹೊರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.