ಕ್ರೈಂರಾಜ್ಯ

ಒಂದೂವರೆ ತಿಂಗಳ ಗಂಡು ಮಗುವನ್ನು  ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಲೆಗೈದ ತಾಯಿ

ಒಂದೂವರೆ ತಿಂಗಳ ಗಂಡು ಮಗುವನ್ನು  ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಪಾಪಿ ತಾಯಿ ಕೊಲೆ ಮಾಡಿರುವ ಹೃದಯ ವಿಧ್ರಾವಕ ಘಟನೆ ವರದಿಯಾಗಿದೆ. ಘಟನೆಯಿಂದ ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಬೆಂಗಳೂರು  ಹೊರವಲಯದ ವಿಶ್ವೇಶ್ವರಪುರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ಮಗುವನ್ನು ತಾಯಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಶೌಚಾಲಯದಲ್ಲಿ ನೀರು ಕಾಯಿಸುವ ಹಂಡೆಯಲ್ಲಿ ತನ್ನ ಒಂದೂವರೆ ತಿಂಗಳ ಮಗುವನ್ನು ಮುಳುಗಿಸಿ ತಾಯಿ ಕೊಲೆ ಮಾಡಿದ್ದು, ಘಟನೆ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ನಗರದ ವಿಶ್ವೇಶ್ವರಪುರದಲ್ಲಿ ವಾಸವಾಗಿದ್ದ ಪವನ್ ಮತ್ತು ರಾಧಾ ದಂಪತಿಯ ಗಂಡು ಮಗುವನ್ನು ತಡರಾತ್ರಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಆರೋಪಿ ರಾಧಾಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಪತಿ ಪವನ್ ಆಟೋ ಡೈವರ್ ಆಗಿದ್ದು, ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೂ ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಹಾಗೂ ಮನಸ್ತಾಪ ಇದ್ದು, ಮಗುವಿನ ಕೊಲೆಗೆ ನಿಖರವಾದ ಕಾರಣ ಕಲೆಹಾಕಲು ನೆಲಮಂಗಲ ಟೌನ್ ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!