ವೇಶ್ಯವಾಟಿಕೆ ಕೃತ್ಯ ನಡೆಸುತ್ತಿರುವ ಆರೋಪ ಪೊಲೀಸ್ ದಾಳಿ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

ಪುತ್ತೂರು: ಪುತ್ತೂರು ಕಸ್ಬಾ ಗ್ರಾಮದ ಸಾಮೆತ್ತಡ್ಕ ಎಂಬಲ್ಲಿ ವಿಲ್ಪೇಡ್ ಎಂಬವರ ವಾಸ್ತವ್ಯದ ಮನೆಯ ಸಮೀಪದ ಕಟ್ಟಡದಲ್ಲಿ, ಅಕ್ರಮವಾಗಿ ವೇಶ್ಯವಾಟಿಕೆ ಕೃತ್ಯ ನಡೆಸುತ್ತಿರುವ ಬಗ್ಗೆ ಜು.1ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಬಂದ ಮೇರೆಗೆ, ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ತೆರಳಿದ ಪೊಲೀಸರು ದಾಳಿ ನಡೆಸಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜು.15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.