ಹೊಸ ‘ಬುಲೆಟ್ಪ್ರೂಫ್’ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಕಾರು ಖರೀದಿಸಿದ್ದಾರೆ. ಅವರ ಬಳಿ ಸಾಕಷ್ಟು ಐಶಾರಾಮಿ ಕಾರ್ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ದೃಷ್ಟಿ. ಹೀಗಾಗಿ ಮರ್ಸಿಡೀಸ್ ಮೇಬ್ಯಾಕ್ ಜಿಎಸ್ಎಲ್ 600 ಎಸ್ಯುವಿ ಕಾರನ್ನು ಸಲ್ಮಾನ್ ಖಾನ್ ಇದೀಗ ಖರೀದಿಸಿದ್ದಾರೆ

.
ಇದು ಕಪ್ಪು ಬಣ್ಣದ ವಾಹನವಾಗಿದ್ದು ಸಂಪೂರ್ಣ ಬುಲೆಟ್ಪ್ರೂಫ್ (Bulletproof) ಆಗಿದೆ. ಇದರ ಬೆಲೆ 3.4 ಕೋಟಿ ರೂ. ನಿಂದ ಆರಂಭವಾಗುತ್ತದೆ. ಕಾರಿನ ಒಳಗಡೆ ತನಗೆ ಬೇಕಾದಂತೆ ವಿನ್ಯಾಸ ಮಾಡಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇದೆ. ಹಲವು ಬಾರಿ ಅವರ ಮನೆ ಮೇಲೂ ಗುಂಡಿನ ದಾಳಿ ಆಗಿತ್ತು. ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಹೀಗಾಗಿ ಸಲ್ಮಾನ್ ಖಾನ್ಗೆ ಸರ್ಕಾರದಿಂದಲೇ ವೈ+ ಭದ್ರತೆಯನ್ನು ನೀಡಲಾಗಿದೆ.