ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್: ವಿಶ್ವ ಪರಿಸರ ದಿನಾಚರಣೆ
ಪುತ್ತೂರು: ಬೆಳಂದೂರಿನ ಈಡನ್ ಗ್ಲೋಬಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ವಿದ್ಯಾರ್ಥಿಗಳಿಗೆ ಪರಿಸರ ಅಳಿವು ಉಳಿವಿನ ಸಂದೇಶವನ್ನು ವಿವರಿಸಿದರು.

ಪರಿಸರ ಪ್ರೇಮಿ ಹಾಗೂ ವಿದ್ಯಾರ್ಥಿ ಹೆತ್ತವರಾದ ಸಿ ಕೆ ಅಬೂಬಕ್ಕರ್ ಸಿದ್ದೀಕ್ ಶಾಲೆಗೆ ತಮ್ಮ ನರ್ಸರಿಯ ಮುಖಾಂತರ ಬೇರೆ ಬೇರೆ ಹಲವು ಗಿಡಗಳನ್ನು ಶಾಲೆಗೆ ನೀಡಿ ತಮ್ಮ ಪರಿಸರ ಪ್ರೇಮವನ್ನು ಪ್ರಕಟಿಸಿದರು. ವಿದ್ಯಾರ್ಥಿ ನಾಯಕ ನಿಶಾನ್ ಪರಿಸರ ದಿನದ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.