ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್(SJM) ಮುರ ರೇಂಜ್ ವಾರ್ಷಿಕ ಮಹಾಸಭೆ
ಬೆಳ್ತಂಗಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (SJM) ಮುರ ರೇಂಜ್-324 ಇದರ
ವಾರ್ಷಿಕ ಮಹಾಸಭೆ ಮೇ.20ರಂದು ಮುರ ನೂರುಲ್ ಹುದಾ ಮುರ ಮದ್ರಸ ಸಭಾಂಗಣದಲ್ಲಿ ರೇಂಜ್ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಪಿಚಲಾರ್ ಅಧ್ಯಕ್ಷತೆಯಲ್ಲಿ ಮುಫತ್ತಿಸ್ ಹಾಫಿಝ್ ಹನೀಫ್ ಮಿಸ್ಬಾಹಿ ಉದ್ಘಾಟನೆಯೊಂದಿಗೆ ಚಾಲನೆಗೊಂಡಿತು.

ಕಾಜೂರು ಸದರ್ ಉಸ್ತಾದ್ ಅಬ್ದುಲ್ ರಹೀಂ ಹನೀಫೀ ಅಲ್ ಫುರ್ಖಾನಿ ಖಿರಾಅತ್ ಪಠಿಸಿದರು. ರೇಂಜ್ ಕಾರ್ಯದರ್ಶಿ ಶರೀಫ್ ಸಅದಿ ಪೆರ್ದಾಡಿ ಸ್ವಾಗತಿಸಿದರು. ನಂತರ ಆರ್.ಓ ಅಬ್ದುಲ್ ಹಮೀದ್ ಸಅದಿ ಯವರ ನೇತೃತ್ವದಲ್ಲಿ 2025 ರಿಂದ 2028ರ ಅವಧಿಯ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಿರಾಜುದ್ದೀನ್ ಸಖಾಫಿ ಪಿಚಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಝಾಖ್ ಇಂದಾದಿ ಪುತ್ರಬೈಲ್, ಕೋಶಾಧಿಕಾರಿ ಅಬ್ದುಲ್ ರಹೀಂ ಹನೀಫೀ ಅಲ್ ಫುರ್ಖಾನಿ ಕಾಜೂರು, ಐಟಿ, ಎಕ್ಸಾಂ & ವೆಲ್ಫೇರ್ ಉಪಾಧ್ಯಕ್ಷರಾಗಿ ಮುಹಮ್ಮದ್ ಝಬೈರ್ ಸಅದಿ ಎರ್ಮಾಲ, ಕಾರ್ಯದರ್ಶಿ ಅಬ್ದುಲ್ ಹಮೀದ್ ಝಹ್ರಿ ಮುರ, ಮ್ಯಾಗಝೀನ್ ಉಪಾಧ್ಯಕ್ಷರಾಗಿ ಅಬೂಸ್ವಾಲಿಹ್ ಝೈನಿ ಕೇಲ್ತಾಜೆ, ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸಅದಿ ಕಿಲ್ಲೂರು,
ಮಿಷನರಿ ಟ್ರೈನಿಂಗ್ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಸಖಾಫಿ ನಿರಿಂದಿ, ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ಅಮಾನಿ ಕುಕ್ಕಾವು,
ಪಿಂಚಣಿ & ಕ್ಷೇಮ ನಿಧಿ ಉಪಾಧ್ಯಕ್ಷರಾಗಿ ಬಶೀರ್ ಸಅದಿ ಮುರ, ಕಾರ್ಯದರ್ಶಿಯಾಗಿ ಮುಹಮ್ಮದ್ ಸಿನಾನ್ ರಝ್ವಿ ದಿಡುಪೆ, ಹಾಗೂ ಉಳಿದ ಎಲ್ಲಾ ಸದರ್ ಉಸ್ತಾದರಗಳನ್ನು ಎಕ್ಸಿಕ್ಯೂಟಿವ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಮುರ ಮಸೀದಿಯ ಅಧ್ಯಕ್ಷ ಹಸೈನಾರ್ ಹಾಗೂ ಉಪಾಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಹಲವು ವರ್ಷಗಳಿಂದ ರೇಂಜಿನಲ್ಲಿ ಸೇವೆಗೈದು ಇದೀಗ ರೇಂಜ್ ನಿಂದ ನಿರ್ಗಮಿಸಿದ ಅಬ್ದುಲ್ ರಶೀದ್ ಮದನಿಯವರನ್ನು ಹಾಗೂ ಪಬ್ಲಿಕ್ ಪರೀಕ್ಷೆ ಯಲ್ಲಿ A+ ಪಡೆದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.