ಪುತ್ತೂರಿನಲ್ಲಿ ಆರೆಸ್ಸೆಸ್ ಪಥ ಸಂಚಲನ
ಪುತ್ತೂರು: ಆರೆಸ್ಸೆಸ್ ಸ್ಥಾಪನಾ ದಿನದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಅ.5ರಂದು ಪಥಸಂಚಲನ ನಡೆಯಿತು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಹೊರಟ ಗಣವೇಷಧಾರಿ ಸ್ವಯಂಸೇವಕರು ಆದರ್ಶ ಆಸ್ಪತ್ರೆ ರಸ್ತೆಯಾಗಿ ಮುಖ್ಯರಸ್ತೆಗೆ ಬಂದು ಗಾಂಧಿಕಟ್ಟೆ ಬಳಿಯ ರಸ್ತೆಯಾಗಿ ಸಾಗಿದ್ದು ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.

