ಕರಾವಳಿ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಖಂಡಿಸಿ ಪುತ್ತೂರಿನಲ್ಲಿ
ಮುಸ್ಲಿಂ ಯುವಜನ ಪರಿಷತ್ ಪ್ರತಿಭಟನೆ


ಪುತ್ತೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ಸಮೀಪ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ಖಂಡಿಸಿ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಮೊಂಬತ್ತಿ ಪ್ರತಿಭಟನೆ ಎ.24ರಂದು ರಾತ್ರಿ ದರ್ಬೆ ಸರ್ಕಲ್ ಬಳಿ ನಡೆಯಿತು.

ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಹೇಯ ಕೃತ್ಯವಾಗಿದ್ದು ಇದನ್ನು ದೇಶದ ಜನರು ಒಗ್ಗಟ್ಟಾಗಿ ಖಂಡಿಸಬೇಕಾಗಿದೆ, ಭಯೋತ್ಪಾದಕ ದಾಳಿಯು ದೇಶದ ಜನರ ಆತಂಕಕ್ಕೆ ಕಾರಣವಾಗಿದ್ದು ಭದ್ರತಾ ವೈಫಲ್ಯವೂ ಈ ದಾಳಿಗೆ ಕಾರಣವಾಗಿದೆ ಎಂದು ಹೇಳಿದರು. ಜಮ್ಮು ಕಾಶ್ಮೀರದಲ್ಲಿ 370 ಆರ್ಟಿಕಲ್ ಹಿಂಪಡೆದ ಬಳಿಕ ಭಯೋತ್ಪಾದನೆ ಸಂಪೂರ್ಣ ನಿಂತಿದೆ ಎಂದು ಕೇಂದ್ರ ಸರಕಾರ ಹೇಳಿತ್ತು, ಆದರೆ ಇದೀಗ ಭೀಕರ ದಾಳಿ ನಡೆದು ಹಲವು ಅಮಾಯಕ ಜೀವಗಳು ಬಲಿಯಾಗಿದ್ದು ದೇಶದ ಗುಪ್ತಚರ ಇಲಾಖೆಯ ವೈಫಲ್ಯವೂ ಇದಕ್ಕೆ ಕಾರಣವಾಗಿದೆ ಎಂದರು.


ಮುಸ್ಲಿಂ ಯುವಜನ ಪರಿಷತ್ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಮಾತನಾಡಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ಅಕ್ಷಮ್ಯವಾಗಿದ್ದು ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕಾಗಿದೆ, ಮಾತ್ರವಲ್ಲದೇ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ರೂ.50 ಲಕ್ಷ ಪರಿಹಾರವನ್ನು ಸರಕಾರ ಕೊಡಬೇಕು ಮತ್ತು ಗಾಯಗೊಂಡವರಿಗೆ 25 ಲಕ್ಷ ರೂ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ನ್ಯಾಯವಾದಿ ಶಾಕಿರ್ ಹಾಜಿ ಮಿತ್ತೂರು, ಇಬ್ರಾಹಿಂ ಕಲ್ಲೇಗ, ಅಶ್ರಫ್ ಮುಕ್ವೆ, ಆರ್.ಪಿ ರಝಾಕ್, ಅಬ್ದುಲ್ ಅಝೀಝ್ ಬಪ್ಪಳಿಗೆ, ತಾಜು ಸಾಲ್ಮರ, ನಝೀರ್ ಬಪ್ಪಳಿಗೆ, ಸಮೀರ್ ಮುರ, ಫಾರೂಕ್ ಕಲ್ಲೇಗ, ಫಾರೂಕ್ ಬಪ್ಪಳಿಗೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಅಶ್ರಫ್ ಬಾವು ಪಡೀಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!