ಜನಿವಾರಕ್ಕೆ ಕೈ ಹಾಕಿದ ಅಧಿಕಾರಿ ವಿರುದ್ದ ಸರಕಾರ ಕ್ರಮಕೈಗೊಳ್ಳಲಿದೆ: ಶಾಸಕ ಅಶೋಕ್ ರೈ
ಪುತ್ತೂರು: ಸಿಇಟಿ ಪರೀಕ್ಷಾ ಕೊಠಡಿಗೆ ಹಾಜರಾಗುವ ವೇಳೆ ವಿದ್ಯಾರ್ಥಿಯೋರ್ವನ ಮೈಮೇಲಿದ್ದ ಜನಿವಾರವನ್ನು ಅಧಿಕಾರಿಗಳು ಕತ್ತರಿಸಿದ ಘಟನೆ ನಡೆದಿದ್ದು ಇದು ಅತ್ಯಂತ ಖಂಡನೀಯ. ಜನಿವಾರ ಮುಟ್ಡಿದರೆ ಜಾಗ್ರತೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಎಚ್ಚರಿಸಿದ್ದಾರೆ.

ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆಯನ್ನು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿ ವಿರುದ್ದ ಸರಕಾರಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಿದೆ. ಈ ದೇಶದ ಸಂಸ್ಕಾರ, ಸಂಸ್ಕೃತಿ, ಪರಂಪರೆಯಾಗಿ ಹಲವು ವಿಚಾರಗಳು ಇಂದಿಗೂ ಉಳಿದಿದೆ. ಅವರವರ ನಂಬಿಕೆ ಆಚಾರ, ವಿಚಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಹೇಳಿದ ಶಾಸಕರು ಜನಿವಾರ ಧರಿಸುವುದು ಒಂದು ಸಂಸ್ಕಾರ, ಸಂಸ್ಕೃತಿಯಾಗಿದೆ ಅದಕ್ಕೆ ಯಾರೇ ಆಗಲಿ ಕೈ ಹಾಕುವುದು ಅಪರಾಧವಾಗುತ್ತದೆ ಎಂದು ಹೇಳಿದರು.
ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಮುಂದೆ ಈ ರೀತಿಯ ಘಟನೆ ನಡೆಯದಂತೆ ಸರಕಾರ ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.