ಮೇನಾಲ: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನೂತನ ಆಡಳಿತ ಕಚೇರಿ ಉದ್ಘಾಟನೆ
ಪುತ್ತೂರು: ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇದರ ನೂತನ ಆಡಳಿತ ಕಚೇರಿಯ ಉದ್ಘಾಟನೆಯನ್ನು ಈಶ್ವರಮಂಗಲ ಖತೀಬರಾದ ಸೆಯ್ಯದ್ ಜಲಾಲುದ್ದೀನ್ ತಂಗಲ್ ಅಲ್ ಬುಖಾರಿ ಇವರು ನೆರವೇರಿಸಿದರು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೆನಾಲ, ಆಡಳಿತ ಅಧಿಕಾರಿ ಅಬ್ದುಲ್ ರಹಿಮಾನ್, ಪ್ರಾಂಶುಪಾಲರಾದ ರಾಜೀಶ್ ಕುಮಾರ್, ಅಡ್ಮಿನ್ ಆಫೀಸರ್ ಅಬ್ದುಲ್ ನಾಸಿರ್, ಮ್ಯಾನೇಜರ್ ರಹಿಯಾನ, ಇಪಿ ಮುಹಮ್ಮದ್ ಕುಂಞಿ, ಎಚ್ ಇಸ್ಮಾಯಿಲ್ ಅಲ್ಲದೆ ಸಂಸ್ಥೆಯ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.